ಪತ್ರಕರ್ತರ ಕ್ರೀಡಾಕೂಟ
ಅನೂಪ್ ನೇತೃತ್ವದ ತಂಡಕ್ಕೆ ಗೆಲವು


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.24: ಎಲ್ಲರಿಗೂ ಅವರದೆ ಆದ ಒತ್ತಡಗಳಿದ್ದು ಇದರ ನಡುವೆಯೂ ಕ್ರೀಡೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಹೇಳಿದರು.
ನಗರದಲ್ಲಿ ವಿಜಯನಗರ ಜಿಲ್ಲಾ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು. ಪ್ರತಿಯೊಂದು ವೃತ್ತಿಯವರೂ ತಮ್ಮದೆ ಆದ ಒತ್ತಡಗಳಿದ್ದು ಯಾರೊಂದಿಗೆ ಹಂಚಿಕೊಳ್ಳಲು ಸಾದ್ಯವಿಲ್ಲ. ಆದರೆ ಇಂತಹ ಕ್ರೀಡಾಕೂಟಗಳು ಸ್ವಲ್ಪಮಟ್ಟಿನ ನೆಮ್ಮದಿ ನೀಡಲಿದೆ ಎಂದರು.
ಜಿಲ್ಲಾಧ್ಯಕ್ಷರು ಪಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ಖಜಾಂಚಿ ಅನಂತ ಜೋಶಿ, ಆರೋಗ್ಯ ಇಲಾಖೆಯ ಧರ್ಮನಗೌಡ ಪಾಲ್ಗೊಂಡಿದ್ದರು.
ಕೆ.ಕೊಟ್ರೇಶ್ ನೇತ್ರತ್ವದ ತಂಡ ಮೊದಲು ಬ್ಯಾಟಿಂಗ್ ಮಾಡಿ 7ವಿಕೇಟ್ ನಷ್ಟಕ್ಕೆ 86 ರನ್ ಗಳಿಸಿದ್ದು ಅನೂಪ್ ನೇತೃತ್ವದಲ  ತಂಡ ಕೇವಲ 8 ಓವರ್ ಗಳಲ್ಲಿ 3 ವಿಕೇಟ್ ನಷ್ಟಕ್ಕೆ 87 ರನ್ ವಿಜಯಿಶಾಲಿಗಳಾದರು. ನಾಯಕ ಅನೂಪ್ ಭರ್ಜರಿ ಬ್ಯಾಟಿಂಗ್ ಗೆಲುವಿಗೆ ಸಹಕಾರಿಯಾಯಿತು.
ಶಶಿಕಾಂತ ಶೆಂಬೆಳ್ಳಿ ಅನಂತ ಜೋಶಿ ನಿರ್ಣಾಯಕರಾಗಿ, ಈಶ್ವರ ಮಡಿವಾಳರ ವೀಕ್ಷಕ ವಿವರಣಾ ಕಾರರಾಗಿ ಸ್ಕೋರ್ ರ ಆಗಿ ವೆಂಕಟೇಶ್ ಕಾರ್ಯನಿರ್ವಹಿಸಿದರು.