ಪತ್ರಕರ್ತರ ಕೊಲೆ ಸಂಚು; ಪ್ರಕರಣವನ್ನು ಸಿಐಡಿ ಒಪ್ಪಿಸಲು ಒತ್ತಾಯ

ಸಿರವಾರ ಜೂ೨೩: ರಾಣೆಬೆನ್ನೂರ ಹತ್ತಿರದ ಅಂಕಾಸುರ ಗ್ರಾಮದಲ್ಲಿ ಯಾವುದೇ ತಪ್ಪು ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಪತ್ರಕರ್ತರನ್ನು ಕೊಲೆಗೈಯಲು ಯತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಐಡಿ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಯ ವತಿಯಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘಟನೆಯ ಲಲಿತಾ ಬಿ ಪಾಟೀಲ್,ಮಹಾಂತೇಶ್ ಗೌಡಗೇರಿ, ನಾಗರಾಜ ಬಾರ್ಕಿ, ಮಾಲತೇಶ ಕುಂದ್ರಳ್ಳಿ ಅವರು ಪಯಣಿಸುತ್ತಿದ್ದ ಕಾರಿಗೆ ಟಿಪ್ಪರ್ ನಿಂದ ಡಿಕ್ಕಿಹೊಡೆದು ಕೊಲೆಗೈಯಲು ಯತ್ನಿಸಿದ ದುಷ್ಕರ್ಮಿಗಳಿಗೆ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರಿಂದ ತನಿಖೆ ನಡೆಸಲು ಅನುಮಾನಾಸ್ಪದವಾಗಿದ್ದು, ಪ್ರಕರಣವನ್ನು ಕೂಡಲೇ ಸಿಐಡಿ ಗೆ ವರ್ಗಾಯಿಸುವಂತೆ ಒತ್ತಾಯಿಸಲಾಯಿತು.
ಈ ವೇಳೆ ಸಂಘಟನೆಯ ತಾಲ್ಲೂಕು ಸಂಚಾಲಕ ಜೆ.ಪ್ರಕಾಶ್,ಮೌನೇಶ, ಆಂಜನೇಯ, ನಾಗಪ್ಪ, ಶಿವಕುಮಾರ್, ಮಲ್ಲಪ್ಪ ಇದ್ದರು.