ಪತ್ರಕರ್ತರ ಕಾರ್ಯ ಪ್ರಶಂಸನೀಯ

 ಜಗಳೂರು.ಜೂ.೨; ಪತ್ರಕರ್ತರು ತಮ್ಮ ಪ್ರಾಣಗಳನ್ನು ಮುಡಿಪಾಗಿಟ್ಟು ಕೆಲ ಸ್ಥಳಗಳಲ್ಲಿ ಕುಟುಂಬದ ಸದಸ್ಯರು ಭೇಟಿ ನೀಡಲು ಸಾದ್ಯವಾಗದಂತಹ ಪರಿಸ್ಥಿತಿಯಲ್ಲಿ ಘಟನೆಗಳನ್ನು ಸಮಾಜಕ್ಕೆ ಸುದ್ದಿ ಭಿತ್ತರಿಸಲು ಸಾಕ್ಷಿಯಾಗಿರುವ ಪತ್ರಕರ್ತರ ಕಾರ್ಯ ಪ್ರಶಂಸನೀಯ ಎಂದು ಸಮಾಜ ಸೇವಕ ದೇೆವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಹೇಳಿದರು.ಪಟ್ಟಣದ ಪತ್ರಿಕಾಭವನದಲ್ಲಿ  ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ನಾನೊಬ್ಬ ಜನಪ್ರತಿನಿಧಿಯಲ್ಲ ನಾನೊಬ್ಬ ಸಮಾಜದಲ್ಲಿ ಕಣ್ಣುಬಿಟ್ಟಿರುವ ಕೂಸು ಸಮಾಜಕ್ಕೆ ಅಳಿಲು ಸೇವೆ ಮಾತ್ರ ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡಲು ಸರ್ವರೂ ಕೈಜೋಡಿಸಬೇಕು. ನಾನೊಬ್ಬ ಕುಗ್ರಾಮದಲ್ಲಿ ಜನಿಸಿ ವೃತ್ತಿಪರ ಪದವಿಧರನಾಗಿ ಶಿಕ್ಷಣ ಸಂಸ್ಥೆಯಲ್ಲಿ ಡಿ ದರ್ಜೆ ನೌಕರನಾಗಿ ಸೇವೆ ಸಲ್ಲಿಸಿ ಕಷ್ಟಗಳ ಮದ್ಯೆ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿಸಿರುವೆ. ಸಾವು ಲೆಕ್ಕಿಸದೆ ಆರೋಗ್ಯ ಇಲಾಖೆಯಲ್ಲಿ ನನ್ನ ಪುತ್ರ ಕೊವಿಡ್ ಕೇರ್ ಸೆಂಟರ್ ನಲ್ಲಿ ಕರ್ತವ್ಯನಿರತನಾಗಿದ್ದು. ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಯಶಸ್ಸು ಸಾದ್ಯ. ಪತ್ರಕರ್ತರು, ಸವಿತಾಸಮಾಜದವರು, ಪೌರಕಾರ್ಮಿಕರು ಸೇರಿದಂತೆ ಬಡವರಿಗೆ ಕೈಲಾದಷ್ಟು ಆಹಾರದ ಕಿಟ್ಟನ್ನು ವಿತರಿಸುತ್ತೇನೆ ಎಂದರು.ಸರ್ಕಾರಿ ನೌಕರರ ಸಂಘದ ಸದಸ್ಯ ಚಂದ್ರಪ್ಪ , ಮಾಜಿ ಅಧ್ಯಕ್ಷ ನಾಗೇಶ್‌ಗೌಡ ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ್ ಅಣಬೂರು ಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಮುಖಂಡ ಓಮಣ್ಣ, ಲಕ್ಷಿö್ಮಕಾಂತ ಸೇರಿದಂತೆ  ಕಾರ್ಯದರ್ಶಿ ಲೊಕೇಶ್ ಎಂ ಐಹೊಳೆ,  ಬಸವರಾಜ್ ,ರಾಜಪ್ಪ ವ್ಯಾಸಗೊಂಡನಹಳ್ಳಿ ,ಮಂಜುನಾಥ್ ,ಬಾಬು ,ಬಸವರಾಜ್ ವಾಸಿಂ, ಧನ್ಯಕುಮಾರ್, ಜಗದೀಶ್ ಸೇರಿದಂತೆ ಇದ್ದರು.