
ವಿಜಯಪುರ: ಮಾ.24:ಪತ್ರಕರ್ತರೂ ಸಾಹಿತಿಗಳಿದ್ದಂತೆ ಡಿವಿಜಿ ಅವರು ಸಹ ಮೂಲತ ಪತ್ರಕರ್ತರಿದ್ದಂತವರು ಅಂತಹ ಮಹಾನ್ ವ್ಯಕ್ತಿ ಪತ್ರಕರ್ತರಾಗಿ ಸಾಹಿತ್ಯ ಲೋಕಕ್ಕೆ ಅಪಾರಕೊಡುಗೆ ನೀಡಿದಂತವರು ಎಂದು ಪತ್ರಕರ್ತ ಸಂಗಮೇಶ ಚೂರಿ ಹೇಳಿದರು.
ನಗರದಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ 18ನೇ ವಿಜಯಪುರಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೆ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಡಿವಿಜಿಯವರಂತೆಒಬ್ಬ ಪತ್ರಕರ್ತ ಬರೀ ವರದಿಗಾರನಾಗಿ ಮಾತ್ರಇರದೇ ಅವನು ಒಬ್ಬ ಸಾಹಿತಿಯೂಆಗಿರುತ್ತಾನೆ. ಸಾಹಿತ್ಯ ಲೋಕಕ್ಕೆ ಪತ್ರಕರ್ತರಕೊಡುಗೆಯೂಅಪಾರವಾದದ್ದುಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ್ದ ಬಿಎಲ್‍ಡಿಇ ಸಂಸ್ಥೆಯ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದರ ಮಾತನಾಡಿ, ನಾವು ಸಾಹಿತ್ಯವನ್ನು ಗಮನಸಿದರೆ ಫ.ಗು ಹಳಕಟ್ಟಿಯವರನ್ನು ನೆನೆಸಲೇಬೇಕು.ಏಕಂದರೆ ಸಾಹಿತ್ಯ ಲೋಕಕ್ಕೆ ಅವರಕೊಡುಗೆಅಪಾರವಾದದ್ದು ಮತ್ತು ಮರೆಯಲಾರದಂತದ್ದು.ಆದರೆಅವರನ್ನು ಸರಿಯಾಗಿಗುರುತಿಸಲಿಕ್ಕೆ ನಾವೆಲ್ಲರೂ ವಿಫಲವಾಗಿದೇವೆಎಂದರು.
ಫ.ಗು ಹಳಕಟ್ಟಿಯವರು ಒಬ್ಬ ಪತ್ರಕರ್ತನಾಗಿ ಶಿವಾನುಭವ ಪತ್ರಿಕೆಯನ್ನುತೆಗೆದು ಸಾಮಾಜಿಕ ಕೆಲಸ ಮಾಡಿದಂತವರು ಮತ್ತು ವಚನಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ಪೀಳಿಗೆಗಳಿಗೆ ಅವುಗಳನ್ನು ದೊರೆಯುವಂತೆ ಮಾಡಿದಅವರ ಕೆಲಸ ಅಸಾಮಾನ್ಯಎಂದರು.
ಘೋಷ್ಠಿಯ ಮೊದಲನೆ ಉಪನ್ಯಾಸ ನೀಡಿದ ಹುಬ್ಬಳ್ಳಿಯ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥೆ ರಶ್ಮಿ.ಎಸ್ ಮಾತನಾಡಿ, ನಾವೆಲ್ಲರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಹೇಗೆ ತಳಕು ಹಾಕಿಕೊಂಡಿದೆಎಂಬುವುದನ್ನು ಮೊದಲು ಅರಿತುಕೊಳ್ಳಬೇಕಾದ ಅವಶ್ಯಕತೆಇದೆಎಂದರು.
ಈಗಿನ ಕಾಲದಲ್ಲಿಏನಾಯಿತುಎಂಬುವುದನ್ನು ತಿಳಿದುಕೊಳ್ಳಲು ಸಾಕಷ್ಟು ಮಾಧ್ಯಮಗಳಿವೆ. ಹೀಗಾಗಿ ಬರವಣಿಗೆಯಲ್ಲಿಚಿತ್ರಣವನ್ನುಕಟ್ಟಿಕೊಡುವ ಕಸಬು ಸವೆದು ಹೋಗುತ್ತಿದೆ.ಏಕೆಂದರೆಡಿವಿಜಿ ಬರೀ ಪತ್ರಕರ್ತರಾಗಿರಲಿಲ್ಲ ಜೊತೆಗೆತಮ್ಮ ಬರವಣಿಗೆಯ ಮೂಲಕ ಸಂಪೂರ್ಣಘಟನೆಯಚಿತ್ರಣವನ್ನುತೋರಿಸುವದಾರ್ಶನಿಕರಾಗಿದ್ದರುಅಂತಹ ಕಲೆ ಈಗ ನಮ್ಮಲ್ಲಿಲ್ಲಎಂದು ವಿಷಾದ ವ್ಯಕ್ತ ಪಡಿಸಿದರು.
ಇನ್ನು ಪತ್ರಿಕಾರಂಗದಲ್ಲಿ ಭಾನುವಾರದ ಪುರವಣಿಗೆಗಳಿಗೆ ಮಾತ್ರ ಸಾಹಿತ್ಯ ಸೀಮಿತವಾಗಿರಬೇಕು ಎಂಬುವುದನ್ನು ಹೋಗಲಾಡಿಸಿ ದಿನನಿತ್ಯದಲ್ಲಿ ನಾವು ನುಡಿಚಿತ್ರಗಳನ್ನು ಬರೆಯಬೇಕಾದಅವಶ್ಯಕತೆಇದೆಎಂದರು.
ಇನ್ನು ನಮ್ಮಲ್ಲಿರುವ ಬರವಣಿಗೆ ಗಟ್ಟಿಗೊಳ್ಳಬೇಕಾದರೆ ಅದಕ್ಕೆ ಆಳವಾದ ಓದಿನ ಅಗತ್ಯವಿದೆ. ಹೆಚ್ಚು ಓದಿದಾಗ ಮಾತ್ರ ನಮ್ಮ ಬರವಣಿಗೆಯಲ್ಲಿಓದುಗರು ಆಸಕ್ತಿ ತೋರಲು ಸಾಧ್ಯ. ಈಗಿಗ ಒಂದು ಹತ್ತು ಪುಸ್ತಕಗಳನ್ನು ಓದಿ ಬರೆಯಬೇಕಾದ ಸಂಯಮ ನಮ್ಮೆಲ್ಲರಲ್ಲಿ ಕಳೆದು ಹೋಗುತ್ತಿದೆ.ಇದೂ ಬರೀ ಪತ್ರಿಕೋದ್ಯಮಕ್ಕೆ ಮಾತ್ರವಲ್ಲಎಲ್ಲ ರಂಗಗಳಲ್ಲಿಯೂ ಈ ಸಮಸ್ಯೆಕಂಡು ಬರುತ್ತದೆ.ಹೀಗಾಗಿ ನಾವೆಲ್ಲರೂಒಂದು ವಿಷಯವನ್ನು ಬರೆಯುವುದಕ್ಕಿಂತ ಮುಂಚೆ ಅದರಕುರಿತು ಹತ್ತು ವಿಷಯಗಳನ್ನು ಓದಬೇಕಾದ ಅನಿವಾರ್ಯತೆಇದೆಎಂದರು.
ಇನ್ನು ಗೋಷ್ಠಿಯಎರಡನೆಉಪನ್ಯಾಸ ನೀಡಿದ ಸಂಯುಕ್ತಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ವಾಸುದೇವ್ ಹೆರಕಲ್ ಮಾತನಾಡಿ, ಒಂದುಕಾಲದಲ್ಲಿ ಪತ್ರಕರ್ತರು ಸಾಹಿತಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದರುಆದರೆ ಈಗ ಸಾಹಿತಿಗಳು ಪತ್ರಕರ್ತರನ್ನು ಹುಡುಕಿಕೊಂಡು ಹೋಗುತ್ತಿರುವುದುದುರಂತಎಂದರು.
ಎಲ್ಲಿ ಸಾಹಿತ್ಯಇರುತ್ತದೆಯೋಅಲ್ಲಿ ಪತ್ರಿಕೋದ್ಯಮಇರಬೇಕಾಗಿಲ್ಲಆದರೆಎಲ್ಲಿ ಪತ್ರಿಕೋದ್ಯಮಇದೆಯೋಅಲ್ಲಿ ಸಾಹಿತ್ಯ ಬೇಕು ಎಂದರು.
ಈಗಿನ ಕಾಲದಲ್ಲಿಅಧ್ಯಯನದಕೊರೆತೆಇದೆ ನಮಗೆ ಬೇಂದ್ರೆ, ಕುವೆಂಪು ಅವರುಗೊತ್ತುಆದರೆ ಈಗಿನ ಕವಿಗಳ ಹೆಸರುಗೊತ್ತಿಲ್ಲಏಕೆಂದರೆ ಓದಿನಲ್ಲಿ ನಾವೆಲ್ಲರೂ ಆಸಕ್ತಿ ಕಳೆದುಕೊಂಡಿದ್ದೇವೆ ಎಂದರು.
ಇನ್ನು ಗೋಷ್ಠಿಯಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಕಾಕಡೆ ಮಾತನಾಡಿ, ಪತ್ರಿಕೆಗಳಿಲ್ಲದೆ ಸಾಹಿತ್ಯವಿಲ್ಲ. ಸಾಹಿತ್ಯವಿರದೆ ಪತ್ರಿಕೆಗಳಿಲ್ಲ ಎಂದರು.
ಕನ್ನಡ ಸಾಹಿತ್ಯಕ್ಕೆ ಪತ್ರಿಕೆಗಳ ಕೊಡುಗೆಯನ್ನು ಮರೆಯುವಂತಿಲ್ಲ. ಏಕಂದರೆ ಪತ್ರಿಕೆಗಳು ಇಂದಿಗೂ ಜೀವಂತಿಕೆಯನ್ನುಕಾಪಾಡಿಕೊಂಡು ಬರುತ್ತಿವೆಎಂದರೆಅದಕ್ಕೆ ಸಾಹಿತ್ಯವೇಕಾರಣ.ಪತ್ರಿಕೆಗಳಲ್ಲಿ ಬರೀ ಸುದ್ದಿಗಳು ಪ್ರಕಟವಾಗುತ್ತಿದ್ದರೆಅದಕ್ಕೆ ಸ್ವಾರಸ್ಯವೇಇರುತ್ತಿರಲಿಲ್ಲ. ಹೀಗಾಗಿ ಕಥೆ, ಕಾದಂಬರಿ, ಲೇಖನ, ಕವನಗಳನ್ನು ಪತ್ರಿಕೆಗಳು ಪ್ರಕಟ ಮಾಡುವ ಮೂಲಕ ಸಾಹಿತ್ಯದೊಂದಿಗೆ ಬೆರೆತುಓದುಗರಿಗೆರುಚಿಯನ್ನು ವದಗಿಸುತ್ತವೆಎಂದು ಹೇಳಿದರು.
ಗೋಷ್ಠಿಯ ಸಾನಿಧ್ಯವನ್ನು ವಹಿಸಿದ್ದ ಕನ್ನೂರು ಹಿರೇಮಠ ಸಂಸ್ಥಾನದ ಶ್ರೀ.ಷ.ಬ್ರ ಸೋಮನಾತ ಶಿವಾಚಾರ್ಯರು ಮಾತನಾಡಿ, ಮೊದಲಿಗೆ ನನಗೆ ಈ ವೇದಿಕೆಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನಾಮವನ್ನುಇಟ್ಟಿದ್ದಕ್ಕೆಅತ್ಯಂತ ಸಂತಸತಂದಿದೆ ಮತ್ತು ಈ ಕಾರ್ಯಕ್ರಮಕ್ಕೆಅದು ಶೋಭೆತಂದಿದೆಎಂದು ಹೇಳಿದರು.
ಶ್ರೀ ಸಿದ್ದೇಶ್ವರ ಶ್ರೀಗಳನ್ನು ನಾವು ಎಂದಿಗೂ ಮರೆಯುವಂತಿಲ್ಲಅವರ ಹೆಸರನ್ನಿಡುವ ಮೂಲಕ ವೇದಿಕೆಗೆ ಒಂದು ಸಾರ್ಥಕತೆ ಬಂದಂತಾಗಿದೆಎಂದರು.
ಇನ್ನು ಪ್ರಸ್ತುತ ದಿನಮಾನದಲ್ಲಿ ಮಾಧ್ಯಮಗಳ ಪಾತ್ರ ಬಹಳ ಪ್ರಮುಖವಾದದ್ದು.ಪರಿಹಾರಕೊಡಿಸುವುದರಿಂದ ಹಿಡಿದು ಹಲವಾರು ಸಾಮಾಜಿಕ ಜವಬ್ದಾರಿಗಳನ್ನು ಮಾಧ್ಯಮಗಳು ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಎಂದರು.
ಈ ಸಮಯದಲ್ಲಿ ಸಿಂದಗಿಯ ಗಂಗಾಧರ ಸ್ವಾಮೀಜಿ, ಬೆಂಗಳೂರಿನ ನಿಡುಮಾಮಿಡಿಮಠದಜಗದ್ಗುರುಡಾ. ವೀರಭದ್ರಚನ್ನಮಲ್ಲ ಸ್ವಾಮೀಜಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಟಿವಿ9 ನ ವರದಿಗಾರ ಅಶೋಕ ಯಡಹಳ್ಳಿ, ನ್ಯೂಸ್ 18ನ ಗುರುರಾಜಗದ್ದನಕೇರಿ, ಹಾಗೂ ಹಿರಿಯ ಪತ್ರಕರ್ತಅಲ್ಲಮಪ್ರಭು ಮಲ್ಲಿಕಾರ್ಜುನಮಠಅವರನ್ನು ಸನ್ಮಾನಿಸಲಾಯಿತು.