ಪತ್ರಕರ್ತರು ಸಾಮಾಜಿಕ ಸೌಧ ಕಟ್ಟಬೇಕು-ಡಾ.ಪದ್ಮನಾಭ

ಸಿಂಧನೂರಸೆ.೨೦-ಗಾಯದ ಕಡೆಗೆ ನಾಲಿಗೆ ಹೊರಳುವ ಹಾಗೆ ಇತ್ತಿಚಿನ ದಿನಗಳಲ್ಲಿ ಧರ್ಮಗಳ ನಡುವೆ ಜಗಳ ಹಚ್ಚವ ಸುಳ್ಳು ಕತೆಗಳನ್ನು ಹೆಣೆಯುವ ಮೂಲಕ ಬಣ್ಣ ಹಚ್ಚಿ ತೋರಿಸುವುದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಬಡವರ ತಳ ಸಮುದಾಯ ಗಳ ಸುದ್ದಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಉಜೆರೆ ಎಸ್.ಡಿ.ಎಂ.ಸ್ನಾತಕೋತ್ತರ ಪದವಿ ಮಾಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪದ್ಮನಾಭ ಹೇಳಿದರು.
ನಗರದ ಹೊಸಳ್ಳಿ ಕ್ಯಾಂಪ್‌ನಲ್ಲಿರುವ ಎಲೆ ಮಂಚಾಲಿ ವಾಸುದೇವ ಕಮ್ಮಾವಾರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ರಾಯಚೂರ ತಾಲೂಕಾ ಘಟಕ ಸಿಂಧನೂರು ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ನೂತನ ಪತ್ರಕರ್ತರ ಪದಗ್ರಣ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರದಲ್ಲಿ ಏರ್ಪಡಿಸಿದ್ದ ಸುದ್ದಿ ಮಾದ್ಯಮ ವೃತ್ತಿ ಪರತೆ ಹಾಗೂ ಸವಾಲುಗಳು ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.
ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ಭಾವನೆ ಇದೆ ಪತ್ರಕರ್ತರು ದಾರಿ ತಪ್ಪಿದರೆ ಇಡಿ ಸಮಾಜವೆ ದಾರಿ ತಪ್ಪಿದಂತೆ ಹಾಗಾಗಿ ಪತ್ರಕರ್ತರು ಜವಾಬ್ದಾರಿಯುತ ವಾಗಿ ಸುದ್ದಿ ಬರೆದು ಸಾಮಾಜಿಕ ಸೌಧ ಕಟ್ಟಬೇಕು ಕೆಡವು ಬಾರದು ಎಂದರು ಕೆಲವು ಮಾದ್ಯಮ ಗಳು ಸಾಕು ಮಾದ್ಯಮಗಳಾಗಿದ್ದು ಇದರಿಂದ ಬಡಜನರ ಸುದ್ದಿಗಳಿಗೆ ಆದ್ಯತೆ ನೀಡದೆ ಮೆರೆಮಾಚುವುದು ಕಂಡು ಬಂದಿದೆ ಎಂದರು.
ಸತ್ಯ ನಿಷ್ಠೂರ ವರದಿ ಮಾಡುವ ಪ್ರಮಾಣಿಕ ಪತ್ರಕರ್ತರು ಇಂದು ಬೀದಿ ಹೆಣವಾಗತ್ತಿದು ಸುಳ್ಳು ವರದಿ ಮಾಡುವ ಪತ್ರಕರ್ತರಲ್ಲದವರು ಇಂದು ವೈಭವ ವಿಲಾಸ ಜೀವನ ನಡೆಸುತ್ತಿದ್ದಾರೆ. ಇದು ದುರಂತ ಇದು ಹೋಗಬೇಕು ಇದು ಈಗ್ಗೆ ಮುಂದು ವರೆದರೆ ಮುಂದಿನ ದಿನಗಳಲ್ಲಿ ಮಾಧ್ಯಮ ರಂಗವನ್ನು ಅದಾನಿ ಅಂಬಾನಿ ಖರೀದಿಸಿದರೆ ಮಾದ್ಯಮ ಅವರ ಸಾಕು ಮಾಧ್ಯಮ ವಾದರೆ ಜನ ಸಾಮಾನ್ಯರ ಗತಿ ಏನು ಎಂದು ಪತ್ರಕರ್ತರಾದ ಶಿವರಂಜನ ಸತಂ ಪೇಟೆ ಸುದ್ದಿ ವರದಿಗಾರಿಗೆ ಬಗ್ಗೆ ಎರಡನೇಯ ಗೋಷ್ಷಿಯಲ್ಲಿ ಮಾತನಾಡಿದರು
ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತರಾದ ಪ್ರಹ್ಲಾದಗುಡಿ ವಹಿಸಿದ್ದರು ಪತ್ರಕರ್ತರಾದ ಚಿದಾನಂದ ದೊರೆ ಚಂದ್ರಶೇಖರ ಬೆನ್ನೂರ ನಾಗರತ್ನ ಶರಣೆಗೌಡ ದುರಗೇಶ ಶಿವಪುತ್ರ ಧನಶೆಟ್ಟಿ ಸಿದ್ದರಾಮೇಶ ಮಾನ್ವಿ ಗುಂಡಪ್ಪ ಸಿರವಾರ ಸೇರಿದಂತೆ ಇತರರು ಗೋಷ್ಠಿಯಲ್ಲಿ ಇದ್ದರು ಕಾರ್ಯಕ್ರಮದ ನಂತರ ಜಿಲ್ಲೆಯ ವಿವಿಧ ತಾಲುಕಾಗಳಿಂದ ಬಂದ್ದಿದ್ದ ಪತ್ರಕರ್ತರಿಗೆ ಅಭಿನಂದನ ಪತ್ರ ಹಾಗೂ ನೆನಪಿನ ಕಾಣಿಕೆಯನ್ನಾಗಿ ವಾಚನ್ನು ನೀಡಿ ಗೌರವಿಸುವ ಮೂಲಕ ಆತ್ಮೀಯ ವಾಗಿ ಕಳಿಸಿಕೋಡಲಾಯಿತು.