ಭಾಲ್ಕಿ:ಜು.25: ಸಮಾಜ ತಿದ್ದುವ ಕಾರ್ಯಮಾಡುತ್ತಿರುವ ಪತ್ರಕರ್ತರು ಸದಾ ಕ್ರಿಯಾಶೀಲರಾಗಿರಬೇಕು ಎಂದು ಕಾಕನಾಳ ಹಾವಗಿಸ್ವಾಮಿ ಮಠದ ಮನ್ಮಥಸ್ವಾಮಿ ಹೇಳಿದರು.
ಪಟ್ಟಣದ ಮೌನೇಶ್ವರ ವಿದ್ಯಾಲಯದಲ್ಲಿ, ಸಂಸ್ಥೆಯ ಅಧ್ಯಕ್ಷ ಇಂದ್ರಜಿತ ಪಾಂಚಾಳ ನೇತೃತ್ವದಲ್ಲಿ ಹ್ಯುಮೆನ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಪತ್ರಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಉತ್ತಮ ಕಾರ್ಯಮಾಡಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ವಿಜಯಕುಮಾರ ಪರ್ಮಾ, ಸಂಘಟನೆಗಳು ಸಾಕಷ್ಟಿದ್ದರೂ ನಮ್ಮನಮ್ಮಲ್ಲಿ ವೈಮನಸ್ಸು ಇರಬಾರದರು. ಸದ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸರ್ವ ಸಂಪಾದಕರ ಸಂಘ, ಪ್ರೆಸ್ ಕ್ಲಬ್, ಎಲೆಕ್ಟ್ರಾನಿಕ್ ಮಿಡಿಯಾ ಸಂಘಟನೆ ಸೇರಿದಂತೆ ವಿವಿಧ ಪತ್ರಕರ್ತರ ಸಂಘಗಳು ಕಾರ್ಯನಿರ್ವಹಿಸುತ್ತಲಿವೆ. ಈ ಎಲ್ಲಾ ಪತ್ರಕರ್ತರ ಮೂಲಧ್ಯೇಯ ಸಮಾಜ ಸುಧಾರಣೆಯಾಗಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಮಾಜಿಕ ವ್ಯವಸ್ಥೆ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ವ ಪತ್ರಕರ್ತರ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಮುಜೀಬ ಪಾಷಾ ಅಧ್ಯಕ್ಷತೆ ವಹಸಿ ಮಾತನಾಡಿದರು. ಎಆರ್‍ಟಿಓ ಜಾಫರ ಷರಿಫ್ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಭಾಲ್ಕಿ ಪತ್ರಕರ್ತರ ಇತಿಹಾಸದ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ.ರಾ.ಕಾ.ನಿ.ಪ.ಸಂಘದ ಕಾರ್ಯದರ್ಶಿ ಗಣಪತಿ ಬೋಚರೆ, ಖಜಾಂಚಿ ಸಂತೋಷ ಬಿಜಿಪಾಟೀಲ, ಡಾ| ಪ್ರಭುಲಿಂಗ ಸ್ವಾಮಿ, ಸಂತೋಷ ಬೇಲೂರೆ, ರಾಹುಲ ಕ್ರಾಂತಿಕಾರಿ, ಸಂತೋಷ ಹಡಪದ, ಪ್ರವೀಣ ಮೇತ್ರೆ, ಸನ್ನಿ ಭೊಸಲೆ, ಭದ್ರೇಶ ಸ್ವಾಮಿ, ಸಂತೋಷ ಬೇಲೂರೆ, ಶಾಂತಕುರಮಾ, ವಿಜಯಕುಮಾರ, ಗಣೇಶ, ಅಶೋಕ ತೇಗಂಪೂರೆ, ಅಶೋಕ ಸಿಂಧೆ ಉಪಸ್ಥಿತರಿದ್ದರು. ಡಾ| ಇಂದ್ರಜೀತ ಪಾಂಚಾಳ ಸ್ವಾಗತಿಸಿದರು. ದೇವಿದಾಸ ಸಿಂಧೆ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.