ಪತ್ರಕರ್ತರು ಕೊವಿಡ್ ವಾರಿಯರ್‍ಸ್

ಕೋಲಾರ,ಏ.೨:ಕೋವಿಡ್‌ನಿಂದ ದೇಶದಲ್ಲಿ ಭಯದ ವಾತಾವರಣದಲ್ಲಿ ಇದ್ದಾಗ ತಮ್ಮ ಪ್ರಾಣವನ್ನು ಲೆಕ್ಕಿಸದೇ ಜನಕ್ಕೆ ಸುದ್ದಿ ಮುಟ್ಟಿಸುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿತ್ತು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರಿಗೆ ತಂಪು ಪಾನೀಯ ವಿತರಿಸಿ ಮಾತನಾಡಿದ ಅವರು, ಸಮಾಜವನ್ನು ತಿದ್ದುವರು ನೀವು ನಿಮ್ಮನ್ನು ಗೌರವಿಸುವ ನಿಟ್ಟನಲ್ಲಿ ನನ್ನದೊಂದು ಅಳಿಲುಸೇವೆ ಅಷ್ಟೇ ಸೇವೆಯ ಮನೋಭಾವದಿಂದ ಎಲ್ಲರಿಗೂ ಸಹಾಯ ಮಾಡುತ್ತಾ ಇದ್ದೇನೆ. ೩೫ ಸಾವಿರ ತಂಪುಯ ಪಾನೀಯಗಳನ್ನು ತಗೆದಕೊಂಡು ವಿವಿಧ ಕಡೆ ಕೊಟ್ಟಿದ್ದೇವೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ. ಮುನಿರಾಜು ಮಾತನಾಡಿ, ಕುರ್ಕಿ ರಾಜೇಶ್ವರಿ ಯವರು ಲಾಕ್‌ಡೌನ್ ಸಂದರ್ಭದಲ್ಲಿ ಅವರ ಕೈಲಾದ ಸಹಾಯವನ್ನು ಮಾಡುತ್ತಾ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆ, ಪೊಲೀಸ್, ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ವಕೀಲರಿಗೆ ಮತ್ತು ಶಿವರಾತ್ರಿ ಪ್ರಯುಕ್ತ ಪ್ರಮುಖ ದೇವಾಲಯಗಳಲ್ಲಿ ತಂಪು ಪಾನೀಯಗಳನ್ನು ವಿತರಿಸಿದ್ದು, ಕರೋನಾ ಸಮಯದಲ್ಲಿ ಶ್ರಮಿಸಿದ ಪತ್ರಕರ್ತರ ಸೇವೆಯನ್ನು ಗುರ್ತಿಸಿ ತಂಪು ಪಾನೀಯವನ್ನು ವಿತರಿಸಿದ್ದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ತಮ್ಮ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದರು.
ಅದೇ ರೀತಿ ದೇವಸ್ಥಾನದ ಬಳಿ ಇರುವ ನಿರ್ಗತಿಕರಿಗೆ, ಬಡಬಗ್ಗರಿಗೂ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಜನಸೇವೆಯನ್ನು ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಶ್ರೀನಿಧಿ ಹಾಗೂ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.