
(ಸಂಜೆವಾಣಿ ವಾರ್ತೆ)
ಚಿಟಗುಪ್ಪ:ಸೆ.3: ಸಮಾಜದಲ್ಲಿ ಜರಗುವ ಪ್ರತಿ ದಿನದ ವಿದ್ಯಮಾನಗಳನ್ನು ಜಗತ್ತಿಗೆ ತಿಳಿಸುವ ಮಾದ್ಯಮ ಪತ್ರಕರ್ತರು ಸದಾ ಒತ್ತಡದ ಜೀವನದಲ್ಲಿ, ಇರುತ್ತಾರೆ, ವರದಿಗಾರಿಕೆಯ ಒತ್ತಡದಲ್ಲಿಯೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಚಿ ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ನುಡಿದರು.
ಪಟ್ಟಣದ ಗಣೇಶ ಮಂದಿರ ದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಸಂಘ ಹಾಗು ಕರ್ನಾಟಕ ಕನ್ನಡ ಸೇನೆ ತಾಲೂಕು ಘಟಕಗಳು ಆಯೋಚಿಸಿದ್ದ ಇತ್ತೀಚೆಗೆ ಅಗಲಿದ ಸಂಜೆವಾಣಿ ಪತ್ರಿಕೆಯ ತಾಲೂಕು ವರದಿಗಾರ ಗೌತಮ ದೇವಿದಾಸ್ ಹೀರಾ ನುಡಿನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೀರಾ ಬಡತನದಲ್ಲಿರುವ ಗೌತಮ ಕುಟುಂಬಕ್ಕೆ ರಾಜ್ಯ ಸಂಘದ ವತಿಯಿಂದ ಹಾಗು ಬೀದರ್ ಜಿಲ್ಲಾ ಸಂಘದ ವತಿಯಿಂದ ಆರ್ಥಿಕ ಸಹಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎಂದರು.
ಕನ್ನಡ ಸೇನೆ ರಾಜ್ಯ ಸಂಚಾಲಕ ರವಿಸ್ವಾಮಿ ನಿರ್ಷಾ ಮಾತನಾಡಿ, ಕಳೆದ ಹದಿನೆಂಟು ವರ್ಷಗಳಿಂದ ಕನ್ನಡಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಗೌತಮ್ ಹೀರಾ ಅವರನ್ನು ಕಳೆದುಕೊಂಡು ಕನ್ನಡಸೇನೆಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟು0ಬಕ್ಕೆ ಬೆನ್ನೆಲೂಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಸಂಜೆವಾಣಿ ಪತ್ರಿಕೆ ಹಾಗು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮತ್ತು ಸರ್ಕಾರದಿಂದ ಗೌತಮ್ ಹೀರಾ ಕುಟುಂಬಕ್ಕೆ ಸಹಾಯ ಮಾಡಲಾಗುವುದೆಂದು ಬರವಸೆ ನೀಡಿದರು
ಉದ್ಯಮಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಸ0ಘದ ತಾಲೂಕು ಅಧ್ಯಕ್ಷ ನವೀನ್ ಎನ್. ಗಂಜಿ ಸ್ವಾಗತಿಸಿ ವಂದನೆ ಸಲ್ಲಿಸಿದರು. ಸಾಹಿತಿ ಸಂಗಮೇಶ ಎನ್ ಜವಾದಿ ಕಾರ್ಯಕ್ರಮ ನಿರೂಪಿಸಿದರು