ಪತ್ರಕರ್ತರಿಗೆ ಸ್ಯಾನಿಟೈಸರ್ – ಮಾಸ್ಕ್ ವಿತರಣೆ

ಜಗಳೂರು. ಏ.೩೦; ಜಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್ ರವರಿಂದ ಪೋಲಿಸ್ ಇಲಾಖೆ ಸಿಬ್ಬಂದಿ ವರ್ಗದವರಿಗು ಹಾಗೂ ಕಾರ್ಯನಿರತ ಪತ್ರಕರ್ತರಿಗೂ ಉಚಿತ ಮಾಸ್ಕ್ ಸ್ಯಾನಿಟಸರ್ ವಿತರಣೆ ಮಾಡಲಾಯಿತು.   ಪಟ್ಟಣದ ಪೋಲಿಸ್ ಇಲಾಖೆ ಆವರಣದಲ್ಲಿ ದಿನನಿತ್ಯ  ಕೊರೊನ ವಾರಿಯರ್ಸ್ ಆಗಿ ರಸ್ತೆಗಿಳಿದು ಕಾರ್ಯನಿರ್ವಹಿಸುವಂತ  ಪೋಲಿಸ್  ಇಲಾಖೆವರಿಗೆ ಮತ್ತು ಪತ್ರಕರ್ತರಿಗೂ ಮಾಸ್ಕ್ ಸ್ಯಾನಿಟಸರ್ ಕಿಟ್ ಗಳನ್ನು ಅವರ ಸ್ವಂತ ಖರ್ಚಿನಿಂದ ವಿತರಿಸಿದರು. ನಂತರ ಮಾತನಾಡಿದರು  ರಾಷ್ಟ್ರೀಯ ಸಿಂಹ ಲಾಂಛನದಲ್ಲಿ ೪ ಸಿಂಹ ಮುಖಗಳು ತಿಳಿಸುವಂತೆ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಹಾಗೂ ರಕ್ಷಣೆ ಕಾರ್ಯವು ಮತ್ತು ನಾಲ್ಕನೇ ಅಂಗ ಮಾದ್ಯಮ ಅಂಗ ಸಮಾಜವನ್ನು ಕಣ್ಣು ತೆರೆಸುವ ಮೂಲಕ ಈ ನಾಲ್ಕು ಅಂಗಗಳು ಪ್ರಾಮಾಣಿಕವಾಗಿ ನ್ಯಾಯ ನಿಷ್ಠೆ ನಿಷ್ಟುರ ಸೇವೆ  ನೀಡುವ ಮೂಲಕ ಸ್ವಾಸ್ಥ್ಯ ಸಮಾಜವನ್ನಕಟ್ಟಲು ಶ್ರೇಷ್ಟ ಅಂಗಗಳಾಗಿವೆ ನಿತ್ಯ ಸಮಾಜದಲ್ಲಿಜಾಗೃತಿ ಮತ್ತು ಸೇವೆ ರಕ್ಷಣೆ ಮತ್ತು ಸುದ್ದಿ ತಿಳಿಸಿ ಸಮಾಜದಲ್ಲಿ ಬೀದಿಗಿಳಿದು ಸೇವೆ ಮಾಡುವಂತ ಅಂಗಗಳು ಸುರಕ್ಷಿತವಾಗಿದ್ದರೆ ದೇಶವು ಸುಭೀಕ್ಷ ಮತ್ತು ಸುಭದ್ರ ದೇಶವಾಗಲು ಸಹಕಾರಿಯಾಗುವುದು. ಎಂದು ಅಬಿಪ್ರಾಯ ವ್ಯಕ್ತಪಡಿಸಿದರು. ಪಿ ಎಸ್ ಐ ಸಂತೋಷ ಬಾಗೊಜಿ ಮಾತನಾಡಿ ಇಂತ ಉದಾರ ದಾನಿಗಳಿಂದ ಕೋರೊನ ಕಾಲದಲ್ಲಿ ಬಡವರಿಗೆ ಸಹಾಯದ ಅಭಯಸ್ತ ಚಾಚುವುದು ಅತ್ಯವಶಕವೆಂದು ಶ್ಲಾಘಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ ಶಿಕ್ಷಕರಾದ ಪ್ರಕಾಶ್ ರವರು ಉಚಿತ ಮಾಸ್ಕ್ ಮತ್ತು ಸ್ಯಾನಿಟಸರ್ ವಿತರಿಸುವ ಮೂಲಕ ಸಹಾಯ ಮಾಡಿರುವುದು ಸೇವಾ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬಡವರಿಗೆ ಲಾಕ್ ಡೌನ್ನಿಂದ ಕೂಲಿಕಾರ್ಮಿಕರಿಗೆ  ಆಹಾರಕ್ಕೆ ಉಲ್ಬವಾಗದಂತೆ ಇಂತ‌ ದಾನಿಗಳ ಸಹಾಯ ಅಗತ್ಯವಾಗಿ ಅವರು ಆತ್ಮಸ್ಥೈರ್ಯದಿಂದ ಬದುಕಲು ಸಹಕಾರಿಯಾಗುವುದು ಮತ್ತೂಷ್ಟು  ದಾನಧರ್ಮ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎ.ಎಸ್.ಐ  ಚಂದ್ರಶೇಖರ್ ನಾಗರಾಜ್ ಪೋಲಿಸ್ ಸಿಬ್ಬಂದಿಗಳಾದ ಮಾರುತಿ ಮಾರಪ್ಪ ಚೈತ್ರ ಅಂಜನ್ ಬಾಬು ಪತ್ರಕರ್ತರಾದ ಲೋಕೆಶ್ ಎಂ ಐಹೊಳೆ ಎಂ ರಾಜಪ್ಪ.ಕೆ ಎಂ ಜಗದೀಶ್ ಧನ್ಯಕುಮಾರ್  ಬಾಬು ಮರೆನಹಳ್ಳಿ ವಾಸಿಮ್ .ಮಂಜುನಾಥ್. ರಕೀಬ್ ಸೇರಿದಂತೆ ಮುಂತಾದವರು ಹಾಜರಿದ್ದರು