ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಲಿ – ಕೆ.ವಿರೂಪಾಕ್ಷಪ್ಪ

ಸಿಂಧನೂರು ಜೂ.೧೦ -ಜಗತ್ತು ವಿಜ್ಞಾನ ದಲ್ಲಿ ಮುಂದುವರಿದರೂ ಸಹ ಕೊರೊನಾ ನಿವಾರಣೆ ಮಾಡುವಲ್ಲಿ ವಿಜ್ಞಾನಿಗಳಿಗೆ ಸಂಕಷ್ಟ ತಂದೊಡ್ಡಿದೆ ಪರಿಸರ ರಕ್ಷಣೆ ಮಾಡಿಕೊಳ್ಳುವ ಜೊತೆಗೆ ನಿಸರ್ಗವನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಅದ್ಯಕ್ಷರು ಹಾಗೂ ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಪತ್ರಕರ್ತರಿಗೆ ಸಂಸ್ಥೆಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಕೊರೊನಾ ಸಂಕಷ್ಟದಲ್ಲಿ ಪತ್ರಕರ್ತರು ನಿಸ್ವಾರ್ಥ ಸೇವೆ ಮಾಡುತ್ತಿರುವದು ಶ್ಲಾಘನೀಯ ಎಂದರು.
ವಿವಿಧ ಸಮಾಜ ಹಾಗೂ ಕೊರೊನಾ ವಾರಿಯರ್ಸಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಕೊರೊನಾ ವಾರಿಯರ್ಸ ಆದ ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕಾಗಿತ್ತು ಎಂದರು.
ಸಂಕಷ್ಟದಲ್ಲಿರುವ ಬಡ ಜನರಿಗೆ ಸಹಾಯ ಮಾಡುವದು ಮನುಷ್ಯನ ಧರ್ಮ ನಾವು ಬಡವರಿಗೆ, ಕೊರೊನಾ ವಾರಿಯರ್ಸ ಗಳಿಗೆ ಹಾಗೂ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆಂದರು.
ವೇತನವಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪತ್ರಕರ್ತರನ್ನು ಸರ್ಕಾರ ಕೊರೊನಾ ವಾರಿಯರ್ಸ ಎಂದು ಘೋಷಣೆ ಮಾಡಿದ್ದು ಪ್ಯಾಕೇಜ್ ಘೋಷಣೆ ಮಾಡದೆ ಇರುವುದು ನೋವಿನ ಸಂಗತಿ ಎಂದು ಕಾರ್ಯ ನಿರತ ಪತ್ರಕರ್ತರ ಸಂಘದ ಅದ್ಯಕ್ಷ ಅಶೋಕ ಬೆನ್ನೂರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.
ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದ್ಯಕ್ಷರಾದ ಎಂ.ದೊಡ್ಡ ಬಸವರಾಜ ,ಪ್ರಾಚಾರ್ಯರಾದ ನಾಗರಾಜ ವಲ್ಕಂದಿನ್ನಿ ,ಕುಮಾರಿ ಚೈತ್ರಾ ದೊಡ್ಡ ಬಸವರಾಜ ,ಅಮರೇಶ ಅಲಬನೂರು ,ಶ್ಯಾಮ್ ಕುಮಾರ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.