ಪತ್ರಕರ್ತರಿಗೆ ಸರಕಾರದ ನೆರವಿನ ಅಗತ್ಯ

ದಾವಣಗೆರೆ.ಜು.೪; ಪತ್ರಕರ್ತರಿಗೆ ಸರಕಾರದ ನೆರವಿನ ಅಗತ್ಯವಿದೆ ಎಂದು ಮಾಯಾಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ನಗರದ ಪಿ.ಬಿ.ರಸ್ತೆಯಲ್ಲಿರುವಅಪೂರ್ವ ಹೋಟೇಲ್ ಸಭಾಂಗಣದಲ್ಲಿ ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದಿAದ ಏರ್ಪಡಿಸಿದ್ದ ಗುರುತಿನಚೀಟಿ ವಿತರಣಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುವ ಅಂಕುಡೊAಕುಗಳನ್ನು ತಿದ್ದಿ ಸಮಾಜದ ಸ್ವಾಸ್ಥö್ಯಕಾಪಾಡುತ್ತಿರುವ ಹಲವು ಪತ್ರಕರ್ತರು ಬಡತನದಲ್ಲಿದ್ದಾರೆ. ಅವರಿಗೆ ಸರಕಾರದ ಸೌಲಭ್ಯಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿವಿಧ ನಿಗಮಗಳಿಂದ ಕೊಡುವ ಸೌಲಭ್ಯ ಬಳಸಿಕೊಂಡು ಪತ್ರಿಕೋದ್ಯಮದಜೊತೆಗೆಅದಾಯ ಬರುವಂತಹ ವೃತ್ತಿ ಮಾಡಿಎಂದು ಕಿವಿಮಾತು ಹೇಳಿದರು.ನಾನು ಕೂಡಚಿಕ್ಕವನಿದ್ದಾಗ ಪತ್ರಿಕೆಗಳನ್ನು ಕೂಗಿ ಮಾರಾಟ ಮಾಡಿದ್ದೇನೆಎಂದು ನೆನಪಿಸಿಕೊಂಡರು. ನನ್ನಎಲ್ಲಾ ಹೋರಾಟಗಳ ಹಾಗೂ ಸಮಾಜ ಸೇವೆಯ ಸುದ್ದಿಗಳನ್ನು ಬಿತ್ತರಿಸಿ ನಾನು ಒಬ್ಬಜನನಾಯಕನಾಗಿ ಹೊರಹೊಮ್ಮಲು ಪತ್ರಕರ್ತರೇಕಾರಣಎಂದು ಹೇಳಿದರು.