ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ನೀಡಲಿ : ಅಯ್ಯಪ್ಪ

ಗಬ್ಬೂರು.ಮೇ.೩೦-ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಳೆದ ಒಂದು ವರ್ಷದಿಂದ ಕೊವೀಡ್- ೧೯ ಮಹಾಮರಿ ವೈರಸ್ ಸುದ್ದಿಯನ್ನು ಎಲ್ಲರಿಗೂ ತಲುಪಿಸಬೇಕು ಜನರನ್ನು ಎಚ್ಚರಗೊಳಿಸಬೇಕು ಅಂತಾ ವರದಿಗಾರರು,ಪತ್ರಿಕೆ ಸಂಪಾದಕರು,ಪತ್ರಿಕೆ ಏಂಜೆಟರು,ಮಾಧ್ಯಮ ಕೇಬಲ್ ಆಪರೇಟರ್ ಗಳಿಗೆ ರಾಜ್ಯ ಸರ್ಕಾರವಾಗಲೀ,ಕೇಂದ್ರ ಸರ್ಕಾರವಾಗಲೀ,ಇದುವರೆಗೆ ವಿಶೇಷ ಪ್ಯಾಕೇಜ್ ನೀಡಲಿ. ಈಗಾದರೂ ಸರ್ಕಾರ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಯುವ ಬ್ರಿಗೇಡ್ (ರಿ) ರಾಯಚೂರು ಜಿಲ್ಲಾಧ್ಯಕ್ಷರು ಅಯ್ಯಪ್ಪ ಗಬ್ಬೂರು ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರೆ.
ಈ ಕರೋನಾ ರೋಗವು ಪ್ರಪಂಚಾದ್ಯಂತ ಇಷ್ಟೊಂದು ಪ್ರಭಾವ ಬೀರುತ್ತದೆ ಎಂದು ಊಹಿಸೋಕೆ ಸಾಧ್ಯವಾಗಲಿಲ್ಲ. ದಿನ ನಿತ್ಯದ ಸಾವುಗಳನ್ನು ನೋಡಿದರೆ ಎಂತಹವರಿಗೆ ಸಹ ಭಯ ಹುಟ್ಟಿಸುತ್ತದೆ. ನಿತ್ಯ ದುಡಿದು ತಿನ್ನುವ ಕೂಲಿ ಕಾರ್ಮಿಕರು ಇಂದು ಕಣ್ಣಿರೊಂದಿಗೆ ತಮ್ಮಯ ಬದುಕನ್ನು ಸಾಗಿಸಲಾಗದೇ ನಲುಗಿ ಹೋಗಿದ್ದರೆ.
ಕರೋನಾ ಮುಕ್ತರಾಗುವಂತಹ ಯಾವ ಲಕ್ಷಣವು ಗೋಚರಿಸಿದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರು ಕೊಟ್ಟಂತಹ ಈ ಹೊಡೆತ ಮಾತ್ರ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಇನ್ನೊಂದು ವಿಚಾರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಕಳೆದ ವರ್ಷ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದರೆ ಈ ವರ್ಷ ಮಾತ್ರ ಬಡವರ ಪರವಾಗಿ ಕಿಂಚಿತ್ತು ಕರುಣೆ ತೋರುತ್ತಿಲ್ಲ ಪತ್ರಕರ್ತರಿಗೆ ಹೊಗಳಿಕೆಯ ಮಾತುಗಳನ್ನು ಹೇಳುವ ಸರ್ಕಾರ ಈವರೆಗೆ ವರದಿಗಾರರಿಗೆ,ಅವರ ಕುಟುಂಬಗಳಿಗೆ ನೇರವಾಗಿಲ್ಲ.
ಸದ್ಯ ಲಾಕ್ ಡೌನ್ ನಲ್ಲಿ ಅನೇಕ ಪತ್ರಕರ್ತರು ಕುಟುಂಬಗಳು ಸಹ ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ.
ನಿತ್ಯವು ಅನೇಕ ಬಡ ಯುವಕರು ದಿನ ನಿತ್ಯದ ಅನೇಕ ಪತ್ರಿಕೆಗಳನ್ನು ಸೈಕಲ್ ಮೇಲೆ ದಿನಾಲು ಮನೆ ಮನೆಗೆ ಹಂಚುತ್ತಿದ್ದರೆ.ಇಂತಹ ಕೋವಿಡ್ ಸಮಯದಲ್ಲಿಯೂ ಅವರು ಅನೇಕ ಸಮಸ್ಯೆಗಳೊಡನೆ ಬಡತನದ ಕಷ್ಟದಲ್ಲಿ ಸುದ್ದಿಯನ್ನು ತಲುಪಿಸಲು ರಾತ್ರಿ ನಿದ್ದೆ ಬಿಟ್ಟು ಅವರು ದುಡಿಯುತ್ತಿದ್ದರೆ.ಪತ್ರಕರ್ತರು ಹಾಗೂ ಕಛೇರಿ ಸಿಬ್ಬಂದಿಗಳು ಬದುಕು ಅತಂತ್ರವಾಗಿದೆ.
ಸರ್ಕಾರ ಸಂಘ ಸಂಸ್ಥೆಗಳು ಸಹಾಯ ಆಸರೆ ದೊರೆಯಬೇಕಾಗಿದೆ.ಪತ್ರಕರ್ತರು ಹಾಗೂ ಕಛೇರಿ ಸಿಬ್ಬಂಧಿಗಳು ಸಂಕಷ್ಟದ ಹಿತ ದೃಷ್ಟಿಯಿಂದ ಸರ್ಕಾರ ಶೀಘ್ರದಲ್ಲೇ ಪ್ರತಿ ಕುಟುಂಬಕ್ಕೆ ೨ ಲಕ್ಷ ರೂಪಾಯಿ ಘೋಷಣೆ ಮಾಡಬೇಕು ಎಂದು ಪತ್ರಕರ್ತರು ಪರವಾಗಿ ಸಿದ್ದರಾಮಯ್ಯ ಯುವ ಬ್ರಿಗೇಡ್ (ರಿ) ರಾಯಚೂರು ಜಿಲ್ಲಾಧ್ಯಕ್ಷರು ಅಯ್ಯಪ್ಪ ಗಬ್ಬೂರು ರವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೆ.