ಪತ್ರಕರ್ತರಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ

ಮುದ್ದೇಬಿಹಾಳ:ಮೇ.15:ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಸೂಚನೆ ಮೇರೆಗೆ ಪಟ್ಟಣದ ಕೆಬಿಎಂಪಿಎಸ್ ಶಾಲಾ ಆವರಣದಲ್ಲಿ ಪ್ರಂಟಲೈನ ಕೋರೋನಾ ವಾರಿಯರ್ಸ್ ಗಳೆಂದು ಘೋಷಿಸಿ ಹಿನ್ನೇಲೆಯಲ್ಲಿ ಪತ್ರಕರ್ತ ಚೇತನ ಕೆಂದೂಳಿಯವರಿಗೆ ಕೋವಿಶಿಲ್ಡ್ ಲಸಿಕೆ ಹಾಕೂವಲ ಮೂಲಕ ಪತ್ರಕರ್ತರಿಗೆ ಮತ್ತು ಪುರಸಭೆ ಪೌರ ಕಾರ್ಮಿಕರಿಗೆ ಮತ್ತು 45 ವಯಸ್ಸಿನ ಮೇಲ್ಪಟ್ಟರಿಗೆ ಎರಡನೆ ಅವಧಿಗೆ ಕೋವಿಶಿಲ್ಡ್ ಲಸಿಕಾ ಅಭಿಯಾನಕ್ಕೆ ತಾಲೂಕಾ ಬಿಜೆಪಿ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ ಚಾಲನೇ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುದ್ದೇಬಿಹಾಳ ಮಂಡಲ ಬಿಜೆಪಿ ಅಧ್ಯಕ್ಷ ಪರಶುರಾಮ ಪವಾರ, ಕೊರೊನಾ ವೈರಾನಿಗೆ ವಿಶ್ವವೇ ತತ್ತರಿಸಿದಾಗ ಕೇಂದ್ರ ಸರಕಾರದ ಸಹಕಾರದಿಂದ ಅದಕ್ಕೆ ಲಸಿಕೆ ಕಂಡುಹಿಡಿಲಾಯಿತು. ಅಲ್ಲದೇ ಪ್ರಧಾನಿ ಮೋದಿಯವರು ಭಾರತದಲ್ಲಿ ಕಂಡುಕೊಂಡಂತಹ ಲಸಿಕೆಯನ್ನು ಹೊರ ದೇಶಗಳಿಗೂ ಉಚಿತವಾಗಿ ನೀಡಿದ್ದರು. ಇದಕ್ಕೆ ಪ್ರತಿಫಲವಾಗಿ ಎರಡನೇ ಕೊರೊನಾ ಅಲೆಗೆ ಹೊರ ದೇಶದಿಂದ ಭಾರತಕ್ಕೆ ಆಮ್ಲಜನಕ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ಉಡುಗೊರೆಯಾಗಿ ಬಂದಿವೆ. ಇಂತಹ ಏಳಿಗೆಯನ್ನು ಸಹಿಸದ ಕೆಲವರು ಲಸಿಕೆ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸಿದ್ದರು. ಆತಂಕದಿಂದ ಕೆಲ ನಾಗರಿಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿ ನಿರ್ಲಕ್ಷ ಮಾಡಿದರು. ಆದರೆ ಈಗ ಹಿಂದೆ ವಿರೋಧಿಸಿದವರೇ ಲಸಿಕೆ ಉತ್ಪಾದನೆಗಾಗಿ ಹಣ ದೇಣಿಗೆಯನ್ನು ನೀಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಲೇವಡಿ ಮಾಡಿದರು.

ಅಪಪ್ರಚಾರ ಮಾಡುವವರ ಮಾತಿಗೆ ಕಿವಿಗೊಟ್ಟು ನ್ಯಾಯಾಲಯವೂ ಕೇಂದ್ರ ಸರಕಾರಕ್ಕೆ ಕೂಡಲೇ ಎರಡನೇ ಲಸಿಕೆಯನ್ನು ಜನರಿಗೆ ಒದಗಿಸಬೇಕು ಎಂದು ಹೇಳಿತು. ಆದರೆ ಒಂದು ಲಸಿಕೆಯನ್ನು ಮಾಡಿದ ಸಂದರ್ಭದಲ್ಲಿ ಲಸಿಕೆಯನ್ನು ತಿಂಗಳು ಗಟ್ಟಲೇ ಇಟ್ಟುಕೊಳ್ಳಲು ಸಾದ್ಯವಾಗದ ಮಾತಾಗಿದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಕೇಂದ್ರ ಸರಕಾರ ಜನತೆ ಆರೋಗ್ಯದ ಹಿತ ದೃಷ್ಠಿಯಿಂದಲೇ ಲಸಿಕೆ ತಯ್ಯಾರಿಕೆಯನ್ನು ಮಾಡುತ್ತಿದೆ. ಆದರೆ ಮೊದಲನೇ ಲಸಿಕೆಗೆ ಕೆಲ ಅವಿವೇಕಿಗಳು ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಜನರು ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಆದರೆ ಎರಡನೇ ಲಸಿಕೆ ಹಾಕುವ ಸಂದರ್ಭದಲ್ಲಿ ಮೊದಲನೇ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಯವರು ಈಗಾಗಲೇ ಪ್ರಥಮವಾಗಿ ಎರಡನೇ ಲಸಿಕೆಯನ್ನು ಹಾಕಲು ಆದೇಶ ಹೊರಡಿಸಿದ್ದು ಕೂಡಲೇ 45 ವರ್ಷದ ಮೇಲ್ಪಟ್ಟ ಮೊದಲನೇ ಲಸಿಕೆ ಹಾಕಿಸಿಕೊಂಡ ಎಲ್ಲ ನಾಗರಿಕರೂ ಎರಡನೇ ಲಸಿಕೆಯನ್ನು ಹಾಕಿಕೊಂಡು ಮುಂದಿನ ಮೊದಲನೇ ಲಸಿಕೆ ಹಾಕಿಸಿಕೊಳ್ಳುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ವಿಜಯ ಬಡಿಗೇರ, ಬಸಯ್ಯಾ ನಂದಿಕೇಶ್ವರಮಠ, ಉದಯ ರಾಯಚೂರ, ಟಿ ಎಚ್ ಇ ಓ ಅನಸೂಯಾ ತೇರದಾಳ, ಎಂ ಎಸ್ ಗೌಡರ ನಗರದ ಕೋವಿಇಡ್ 19 ತಂಡೆದ ಮೇಲ್ವಿಚಾರಕ ಎಸ್ ಎಸ್ ಮಾಗಿ, ರೇಷ್ಮಾ, ಚವ್ಹಾಣ, ಪ್ರಕಾಶ ತೋಳಲದಿನ್ನಿ, ಪ್ರಭು ಮಸೂತಿ, ಅನಸೂಯಾ ತೇರದಾಳ,ಸೇರಿದಂತೆ ಹಲವರು ಇದ್ದರು.