ಪತ್ರಕರ್ತರಿಗೆ ಮಾಸ್ಕ,ಫೇಸ್ಕ ಮಾಸ್ಕ,ಸ್ಯಾನಿಟೈಜರ್ ವಿತರಣೆ

(ಸಂಜೆವಾಣಿ ವಾರ್ತೆ)
ಇಂಡಿ :ಜೂ.6:ಕೊರೋನಾದಂತ ಸಂದರ್ಭದಲ್ಲಿ ಕೊರೋನಾ ವಾರಿಯರ್ಸಂತೆ ಪತ್ರಕರ್ತರು ಮುಂಜೂಣಿಯಲ್ಲಿ ನಿಂತು ಸುದ್ದಿಗಳ ವರದಿ ಮಾಡಿದ್ದಾರೆ.ಸರ್ಕಾರವೂ ಕೂಡಾ ಪತ್ರಕರ್ತರಿಗೆ ಪ್ರಂಟ್‍ಲೈನ್ ವಾರಿಯರ್ಸ ಎಂದು ಘೋಷಿಸಿದೆ. ಪತ್ರಕರ್ತರು ಸಹ ಜಾಗ್ರತ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
ಅವರು ಶನಿವಾರ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಪತ್ರಕರ್ತರಿಗೆ ಫೇಸ್ ಮಾಸ್ಕ, ಸ್ಯಾನಿಟೈಜರ್,ಮಾಸ್ಕಗಳನ್ನು ವಿತರಣೆ ಮಾಡಿ ಮಾತನಾಡಿದರು.
ಸುದ್ದಿಗಳನ್ನು ವರದಿ ಮಾಡುವ ಭರಾಟೆಯಲ್ಲಿ ಕೊರೋನಾವನ್ನು ನಿರ್ಲಕ್ಷಿಸುವಂತಿಲ್ಲ. ತಮ್ಮ ಸುರಕ್ಷೆಯ ಜೊತೆ ಕರ್ತವ್ಯ ನಿರ್ವಹಿಸಬೇಕು. ವರದಿ ಮಾಡಿದ ಸ್ಥಳದಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ,ಸ್ಯಾನಿಟೈಜರ್ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಪತ್ರಕರ್ತರು ಎಲ್ಲಾ ಕಡೆಗಳಲ್ಲಿಯೂ ಹೋಗಿ ಸುದ್ದಿ ಮಾಡುತ್ತಿರುವುದರಿಂದ ಪತ್ರಕರ್ತರಿಗೆ ಕೋವಿಡ್ ಸುರಕ್ಷತೆಯ ಪರಿಕರಗಳನ್ನು ನೀಡಬೇಕು ಎಂದು ಭಾವಿಸಿ,ಇಂದು ಎಲ್ಲ ಪತ್ರಕರ್ತರಿಗೆ ನೀಡಲಾಗಿದೆ ಎಂದು ಹೇಳಿದರು.
ಪತ್ರಕರ್ತರಾದ ಉಮೇಶ ಕೊಳೆಕರ, ಖಾಜು ಸಿಂಗೆಗೋಳ, ಲಾಲಸಿಂಗ ರಾಠೋಡ, ಶರಣು ಕಾಂಬಳೆ, ಅಬುಶಾಮ ಹವಲ್ದಾರ, ಯಲಗೊಂಡ ಬೇವನುರ,ರಾಜು ಚಾಬೂಕಸವಾರ,ಶಂಕರ ಜಮಾದಾರರ, ಫಯಾಜ ಬಾಗವಾನ,ಬಿ.ಎಸ್.ಹೊಸೂರ,ರಾಮಚಂದ್ರ ಕಾಂಬಳೆ, ವಾಷೀಮ,ಜೈಭೀಮ ಸಿಂಗೆ, ಎಸ್.ಎಮï.ಬಿರಾದಾರ, ಗಣಾಚಾರಿ, ವಿನೋದ ಸಿಂಗೆ, ಸಂಜು ಜನ್ನಾ, ಇತರರು ಈ ಸಂದರ್ಭದಲ್ಲಿ ಇದ್ದರು