ಪತ್ರಕರ್ತರಿಗೆ ನೀಡುವ   ಜಿಲ್ಲಾ  ಪ್ರಶಸ್ತಿ ಗೆ ಪಿ.ಕೃಷ್ಣ ಆಯ್ಕೆ

ಸಿರವಾರ ಜು27- 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಜಿಲ್ಲಾ ಘಟಕ ಮತ್ತು ‘ರಾಯಚೂರು ರಿಪೋಟರ್ಸ್ ಗಿಲ್ಡ್’  ವತಿಯಿಂದ 2022 ನೇ ಸಾಲಿನ ಜಿಲ್ಲಾ ಮಟ್ಟದ ‘ಉತ್ತಮ ಪತ್ರಕರ್ತ’ ಪ್ರಶಸ್ತಿಗೆ ಸಿರವಾರ  ತಾಲೂಕು ಪ್ರಜಾವಾಣಿ ವರದಿಗಾರ ಪಿ.ಕೃಷ್ಣ ಅವರು ಆಯ್ಕೆಯಾಗಿದ್ದಾರೆ.

 ಇದೇ ತಿಂಗಳು  29 ರಂದು  ಮಸ್ಕಿ ಪಟ್ಟಣದ ನೂತನವಾಗಿ ನಿರ್ಮಾಣವಾಗಿರುವ ಪತ್ರಕಾ ಭವನ ಉದ್ಘಾಟನೆ ಹಾಗೂ  ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿವ ವಾರ್ಷಿಕ ಪ್ರಶಸ್ತಿಯನ್ನು  ಪತ್ರಕರ್ತ ಪಿ.ಕೃಷ್ಣ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನಿಸಿ ಗೌರವಿಸಲಾಗುತ್ತದೆ. ಮೂಲತ ಸಿರವಾರ ಪಟ್ಟಣದ ನಿವಾಸಿಯಾಗಿದ್ದೂ ಪತ್ರಿಕೆ ಮಾರಾಟದಿಂದ ವೃತ್ತಿ ಪ್ರಾರಂಭಿಸಿದ ಇವರು ಮಾರಾಟದ ಜೊತೆಗೆ ಉದಯವಾಣಿ ದಿನಪತ್ರಿಕೆಯಿಂದ ಪತ್ರಕರ್ತ ವೃತ್ತಿ ಪ್ರಾರಂಭಿಸಿ, ಪ್ರಸ್ತುತ  ಪ್ರಜಾವಾಣಿ  ದಿನಪತ್ರಿಕೆಯ ಸಿರವಾರ ತಾಲೂಕ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

 ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಹಾಗು ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.