ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.24 ಕ್ಷೇತ್ರದ ಪತ್ರಕರ್ತರಿಗೆ ನಿವೇಶನ ಸೇರಿದಂತೆ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿವೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ ಭರವಸೆ ನೀಡಿದರು.
ಪಟ್ಟಣದ ಜಿ ವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಬುದ್ಧ ಬಸವ ಅಂಬೇಡ್ಕರ್ ಸಭಾಂಗಣದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಸಮಾಜದಲ್ಲಿ ಪತ್ರಿಕೆ ಮಾಧ್ಯಮದವರ ಪಾತ್ರ ಬಹಳ ದೊಡ್ಡದಿದೆ ಅವರು ದೇಶದ ಆದರ ಸ್ತಂಭವಾಗಿ ಮೂರು ಆಧಾರ ಸ್ಥಂಭಗಳನ್ನು ಎಚ್ಚರಿಸುವ ಮತ್ತು ಬೆಳಕು ಚೆಲುವ ಕೆಲಸ ಪತ್ರಕರ್ತರು ಮಾಡುತ್ತಿದ್ದಾರೆ. ಸತ್ಯಕ್ಕೆ ಹತ್ತಿರವಾದ ವರದಿಯನ್ನು ಮಾಡುತ್ತದೆ ಎಂದರೆ ಅದು ಮುದ್ರಣ ಮಾಧ್ಯಮ ದಿಂದ ಮಾತ್ರ ಸಾಧ್ಯ. ಇಂತಹ ಪತ್ರಿಕೆ ಮಾಧ್ಯಮದವರಿಗೆ ಅನ್ಯಾಯವಾಗಿದೆ. ಕಾರಣ ಪತ್ರಕರ್ತರಾಗಿ ಕೆಲಸ ನಿರ್ವಹಿಸುವ ಎಷ್ಟೋ ಪತ್ರಕರ್ತರು ಬಹಳ ಸಂಕಷ್ಟದಲ್ಲಿದ್ದಾರೆ ಅವರಿಗೆ ಯಾವುದೇ ಭದ್ರತೆ ಸಂಬಳ ಇರುವುದಿಲ್ಲ ಅಂತ ಪತ್ರಕರ್ತರಿಗೆ ನ್ಯಾಯ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಜಿವಿಪಿಪಿ ಪ್ರಥಮ ದರ್ಜೆಯ ಪ್ರಾಂಶುಪಾಲರಾದ ಡಾ. ಕೆ. ವೆಂಕಟೇಶ್ ಮಾತನಾಡಿ ಸಮಾಜದಲ್ಲಿ ಕೆಲಸ ಮಾಡುವ ಒಬ್ಬ ಪತ್ರಕರ್ತರ ಹಾದಿ ಕೂಡ ಅಷ್ಟು ಸುಲಭವಲ್ಲ ತಮ್ಮ ಸಂಕಷ್ಟಗಳ ನಡುವೆ ಈ ಸಮಾಜವನ್ನು ವ್ಯವಸ್ಥಿತವಾದಂತಹ ದಾರಿಗೆ ತರುವ ಸಂದರ್ಭದಲ್ಲಿ ಅನೇಕ ಅಪಾಯಗಳನ್ನು ಹೆದರಿಸಿ ತನ್ನ ಕಾಯಕವನ್ನು ನಿರ್ವಹಿಸುತ್ತಾನೆ. ಅನೇಕ ಪತ್ರಕರ್ತರು ವೃತ್ತಿ ಜೀವನದಲ್ಲಿ ಜೀವ ಕಳೆದುಕೊಂಡುವರು ಇದ್ದಾರೆ. ಸ್ವತಂತ್ರ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಸೇರಿದಂತೆ ಅನೇಕ ಹೋರಾಟಗಳಲ್ಲಿ ಪತ್ರಕರ್ತರ ಪಾತ್ರ ಕೂಡ ಕಾಣಬಹುದು. ಸರ್ಕಾರವನ್ನು ಎಚ್ಚರಿಸುವ ಮತ್ತು ಬೀಳಿಸುವಂತಹ ಶಕ್ತಿ ಒಂದು ಪತ್ರಿಕೆಗೆ ಇದೆ. ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನಿದ್ದೆಗೆಡಿಸುವ ಕೆಲಸ ಪತ್ರಕರ್ತರು ನಿರ್ವಹಿಸಿದ್ದಾರೆ. ಯಾವ ಸಮುದಾಯಕ್ಕೆ ಧ್ವನಿ ಇಲ್ಲವೋ ಅಂತಹ ಸಮುದಾಯದ ಪರ ಪತ್ರಕರ್ತರು ಧ್ವನಿಯಾಗಿದ್ದಾರೆ. ಶ್ರಮಿಕ ವರ್ಗ ಮತ್ತು ಹೋರಾಟದ ಪರ ಪತ್ರಿಕೆಗಳು ಇಂದಿಗೂ ಕಾರ್ಯ ನಿರ್ವಹಿಸುತ್ತವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿದರು.
ಮುಖ್ಯತಿಥಿಗಳಾಗಿ ಭಾಗವಹಿಸಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಉಮಾಪತಿ ಶೆಟ್ಟರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ್, ತಾ ಪಂ ಇಒ ಜಿ ಪರಮೇಶ್ವರಪ್ಪ, ಕೂಡ್ಲಿಗಿಯ ಅಧ್ಯಕ್ಷ ಮಂಜುನಾಥ್ ಮಯೂರ್, ಪತ್ರಕರ್ತರಾದ ಮಂಜುನಾಥ್ ಪಟ್ಟಣಶೆಟ್ಟಿ ಉಮೇಶ್ ನೆಲ್ಕುದ್ರಿ ವಿಶ್ವನಾಥ್ ಬಾವಿಕಟ್ಟಿ, ವೀರೇಶ್ ಮಜ್ಜಿಗಿ, ಡಿ ಭೀಮರಾಜ್, ರಾಜಾವಲಿ, ಅಕ್ಕಂಡಿ ಬಸವರಾಜ್ , ಬಿಕೆ ಬಸವರಾಜ್ ಇದ್ದರು.
ಕಾರ್ಯಕ್ರಮದ ಸ್ವಾಗತ ಹಿರಿಯ ಪತ್ರಕರ್ತ ಸಿ. ಶಿವಾನಂದ್, ನಿರೂಪಣೆ ಸಂಘದ ಜೆ. ನಾಗರಾಜ್, ಅಶೋಕ್ ಉಪ್ಪಾರ್ ನಿರ್ವಹಿಸಿದರು .
ಪ್ರಾರ್ಥನೆಯ ಮತ್ತು ಸಂಗೀತ ಶಾರದ ಹಾಗೂ ರೇವಣಸಿದ್ದ ಆಚಾರ್ ಮಾಡಿದರು.