ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಮರಿಯಮ್ಮನಹಳ್ಳಿ, ಮೇ.31: ಪಟ್ಟಣದ ನಾಡಕಾರ್ಯಾಲಯದ ಆವರಣದಲ್ಲಿ ಪತ್ರಕರ್ತರಿಗೆ ಹೊಸಪೇಟೆಯ ಕಾಗ್ನಿಷನ್ ಸೋಷಿಯಲ್ ಇನೋವೇಷನ್ & ರಿಸರ್ಚ್ ಸೆಂಟರ್‍ನವರು ದಿನಸಿ ಕಿಟ್‍ಗಳನ್ನು ವಿತರಿಸಿದರು.
ಕಿಟ್ ವಿತರಿಸಿ ಸಂಸ್ಥೆಯ ಮುಖ್ಯ ನಿರ್ವಾಹಕಿ ಸಂಪದ ಮಾತನಾಡಿ, ಸಂಸ್ಥೆಯು ಗುಣಮಟ್ಟದ ಶಿಕ್ಷಣದ ಜೊತೆಗೆ ಹಸಿವು ಮುಕ್ತ ಸಮಾಜದ ನಿರ್ಮಾಣ, ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಳೆದ 4 ವರ್ಷಗಳಿಂದ ಕೈಗೊಳ್ಳುತ್ತಾ ಬಂದಿದೆ. ಈ ಕೊರೊನಾ ಎರಡನೇ ಅಲೆಯ ಲಾಕ್‍ಡೌನ್ ಸಮಯದಲ್ಲಿ ವಿವಿಧೆಡೆ ಸುಮಾರು 20000 ಆಹಾರ ಪೆÇಟ್ಟಣಗಳನ್ನು ವಿತರಿಸುತ್ತಾ ಬಂದಿದ್ದು, 100 ದವಸಧಾನ್ಯದ ಕಿಟ್ಗಳನ್ನು ಹಂಚಿದ್ದೇವೆ. ಅಲ್ಲದೇ ಹೊಸಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 27 ಸರ್ಕಾರಿ ಶಾಲೆಗಳಲ್ಲಿ ಸಣ್ಣ ಪ್ರಮಾಣದ ಗ್ರಂಥಾಲಯಗಳನ್ನು ಸಂಸ್ಥೆಯವತಿಯಿಂದ ಸ್ಥಾಪಿಸಲಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕೆ ನಾಗೇಂದ್ರ ಬಾಬು, ರವಿರಾಜ್‍ರ ನಿರ್ದೇಶನದಲ್ಲಿ ಇಂದು ಸಂಸ್ಥೆಯ ಸದಸ್ಯರಾದ ಕುಮಾರಿ ಸಂಪದ, ಅನೀಸ್ ನಾಯರ್, ವಕೀಲ ಅನಿಲ್ ಕುಮಾರರು ಮರಿಯಮ್ಮನಹಳ್ಳಿಯ ಪತ್ರಕರ್ತರಿಗೆ ಧವಸಧಾನ್ಯದ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ನಾಡಕಾರ್ಯಾಲಯದ ಕಂದಾಯ ನಿರೀಕ್ಷಕ ಅಂದಾನಗೌಡ ಉಪಸ್ಥಿತರಿದ್ದರು.