ಪತ್ರಕರ್ತರಿಗೆ ಜೀವನ ಭದ್ರತೆ ದೊರಕಬೇಕು

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಹರಿಹರ.ಸೆ.10; ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಶ್ರಮಿಸುವ ಪತ್ರಕರ್ತರ ಬದುಕು ಅತಂತ್ರವಾಗಿರಬಾರದು. ಅವರಿಗೆ ಜೀವನ ಭದ್ರತೆ ದೊರಕಬೇಕೆಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನAದಪುರಿ ಸ್ವಾಮೀಜಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಹರಿಹರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ  ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿತ್ತಾರೆಂಬ ಭಾವನೆ ಸಮಾಜದಲ್ಲಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಶ್ರಮಿಸುವ ಪತ್ರಕರ್ತರಿಗೆ ಜೀವನ ಭದ್ರತೆ ದೊರಕಬೇಕು. ಇದಕ್ಕಾಗಿ ಸರ್ಕಾರ ಅಗತ್ಯ ಸಹಕಾರ ನೀಡಬೇಕು. ತಾವೂ ಕೂಡ ಈ ಬಗ್ಗೆ ಮುಖ್ಯಮಂತ್ರಿ, ಸಂಬAಧಿತ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.ಉಪನ್ಯಾಸ ನೀಡಿದ ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಂಭಾವನೆ ಕಡಿಮೆ ಇದೆ ಎಂದು ಬೇಸರಿಸದೆ, ನಿತ್ಯ ನಮ್ಮ ಓಡಾಟದಲ್ಲಿ ಕಂಡು ಬರುವ ಪ್ರಸಂಗ, ಸುದ್ದಿಗಳ ವೀಡಿಯೋ ಮಾಡಿ ಯು ಟ್ಯೂಬ್ ಹಾಗೂ ಇತರೆ ವಿದ್ಯನ್ಮಾನ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡಿದರೆ ಕ್ರಮೇಣ ಅದರಿಂದಲೂ ಆದಾಯ ಹಾಗೂ ಹೆಸರು ಗಳಿಸಬಹುದಾಗಿದೆ ಎಂದರು.ಆಧುನಿಕ ತಂತ್ರಜ್ಞಾನ ಬಳಕೆಗೆ ಒಗ್ಗಿಕೊಳ್ಳಬೇಕು. ನಾವು ಬಳಸುವ ಮೊಬೈಲ್ ಫೋನ್‌ನಲ್ಲಿರುವ ಆಪ್‌ಗಳನ್ನು ದಕ್ಷವಾಗಿ ಬಳಸಿಕೊಂಡರೆ ನಮ್ಮ ವೃತ್ತಿಯಲ್ಲಿ ಯಶಸ್ಸು ಕಾಣಬಹುದೆಂದ ಅವರು ಬರವಣಿಗೆ, ಭಾಷಾ ಜ್ಞಾನದಂತಹ ಅಂಶಗಳು ಮಾದ್ಯಮ ಕ್ಷೇತ್ರದಲ್ಲಿರುವವರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ, ಸಂಘದ ಸದಸ್ಯರ ತುರ್ತು ಸಂದರ್ಭಕ್ಕೆ ಸಹಾಯವಾಗುವಂತೆ ಕಲ್ಯಾಣ ನಿಧಿ ಯೋಜನೆ ಅಳವಡಿಸಬಹುದಾಗಿದೆ ಎಂದರು.  ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವುದು ದುಸ್ತರವಾಗಿದೆ. ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ದುಸ್ಥಿತಿ ನಮ್ಮದಾಗಿದೆ. ಕಾರ್ಯಾಂಗ, ಶಾಂಸಕಾAಗವನ್ನು ಎಚ್ಚರಿಸುವ, ಅವು ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಮಹತ್ವದ ಜವಾಬ್ದಾರಿ ಹೊತ್ತ ಪತ್ರಕರ್ತರಿಗೆ ಸರ್ಕಾರ ಅಗತ್ಯ ಸೌಲಭ್ಯ ಸೌಕರ್ಯಗಳನ್ನು ಒದಗಿಸಬೇಕೆಂದರು.ಕಾAಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಜನ ಸಾಮಾನ್ಯರ ಹಕ್ಕು, ಬಾಧ್ಯತೆಗಳನ್ನು ಕಾಪಾಡುವ ಮಹತ್ವದ ಜವಾಬ್ದಾರಿ ನಿಭಾಯಿಸುವ ಮಾದ್ಯಮದವರ ಆರ್ಥಿಕ ಭದ್ರತೆಗೆ ಸರ್ಕಾರ ಗಮನ ಹರಿಸಬೇಕು. ನಿರ್ಧಿಷ್ಟವಾಗಿ ಮನವಿ ನೀಡಿದರೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪೂರ್, ನಗರಸಭಾ ಸದಸ್ಯ ಎಂ.ಆರ್.ಮುಜಮ್ಮಿಲ್ (ಬಿಲ್ಲು) ಮಾತನಾಡಿದರು. ಗಿರಿಯಮ್ಮ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘದ ಉಪಾದ್ಯಕ್ಷ ಎಚ್.ಸುಧಾಕರ ಸ್ವಾಗತಿಸಿದರು, ಕಾರ್ಯದರ್ಶಿ ಎಚ್.ಸಿ.ಕೀರ್ತಿಕುಮಾರ್ ನಿರೂಪಿಸಿದರು, ಸಹ ಕಾರ್ಯದರ್ಶಿ ಆರ್.ಮಂಜುನಾಥ್ ವಂದಿಸಿದರು.ಸAಘದ ಪದಾಧಿಕಾರಿಗಳಾದ ಬಿ.ಎಂ.ಚAದ್ರಶೇಖರ್, ವೈ.ನಾಗರಾಜ್, ಸಂತೋಷ್ ಎಂ.ನೋಟದವರ,ಟಿ.ಇನಾಯತ್ ಉಲ್ಲಾ, ಬಿ.ಎಂ.ಸಿದ್ದಲಿAಗಸ್ವಾಮಿ, ಆರ್.ಬಿ ಪ್ರವೀಣ್ ಹನಗವಾಡಿ. ಚಂದ್ರಶೇಖರ್ ಕುಂಬಾರ್, ಕೆ.ಪಂಚಾಕ್ಷರಿ,ಜಿಗಳಿ ಪ್ರಕಾಶ್, ಕುಂಬಳೂರು ಸದಾನಂದ, ಕೃಷ್ಣ ರಾಜೋಳಿ, ಸುರೇಶ್ ಕುಣಿಬೆಳಕೆರೆ, ಚಿದಾನಂದ ಕಂಚಿಕೇರಿ, ಗಂಗನರಸಿ ಕುಮಾರ್, ಮಂಜುನಾಥ ರಾಜನಹಳ್ಳಿ, ವಿಶ್ವನಾಥ ಮೈಲಾಳ ಹಾಗೂ ಇತರರಿದ್ದರು.