ಪತ್ರಕರ್ತರಿಗೆ ಖಾಲಿ ನಿವೇಶನ ಕಲ್ಪಿಸಿಕೊಡುವುದಾಗಿ :ಶಾಸಕ ಭೀಮನಾಯ್ಕ್ ರವರು  ಭರವಸೆ


ಸಂಜೆವಾಣಿ :ಕೊಟ್ಟೂರು
ಕೊಟ್ಟೂರು, ಜು.30: ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕ ದಿನಾಚರಣೆ ಉದ್ಘಾಟಿಸಿ  ಮಾತನಾಡಿ  ಪತ್ರಕರ್ತರಿಗೆ  ಲ್ಯಾಪ್ ಟಾಪ್ ನೀಡುವುದಾಗಿ ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ನೀಡುವುದಾಗಿ  ಜಿಲ್ಲಾ ಅಧಿಕಾರಿಯೊಂದಿಗೆ ಚರ್ಚಿಸಿ ಸೌಲಭ್ಯವನ್ನು ಕಲ್ಪಿಸಿಕೊಡುವುದಾಗಿ ಶಾಸಕ ಭೀಮನಾಯ್ಕ್ ರವರು  ಭರವಸೆ ಪತ್ರಿಕೆ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ  ವಿಜಯವಾಣಿ ಸಹ  ಸಂಪಾದಕರಾದ  ವೀರಣ್ಣ ನವರು ಪತ್ರಿಕೆ ರಂಗದಲ್ಲಿ ಆಗುವಂತಹ  ಏಳು ಬಿಳು ಹಾಗೂ ಪತ್ರಕರ್ತರ ಜೀವನ ಕುರಿತು   ತುಂಬಾ ಸೊಗಸಾಗಿ ವಿವರಿಸಿ ಮಾತನಾಡಿದರು
ಇದೆ ಸಂದರ್ಭದಲ್ಲಿ ಮಾತನಾಡಿದ ಎಂಎಂಜೆ ಹರ್ಷವರ್ಧನ್ ರವರು ಕೆಲವು ಎಲೆಕ್ಟ್ರಿಕಲ್ ಮೀಡಿಯಾ ದವರು ಒಂದೇ ಪಕ್ಷಕ್ಕೆ ಸೀಮಿತವಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಆದರೆ ಪ್ರಿಂಟ್ ಮೀಡಿಯಾ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯ  ನಿರ್ವಸುತ್ತಿವೆ ಎಂದು ಹೇಳಿ ಶುಭ ಹಾರೈಸಿದರು
ಸಮಾಜದಲ್ಲಿ ಜಾತಿ-ಜಾತಿಯ ಮಧ್ಯೆ ಆಗುವ  ಶೋಷಣೆಯನ್ನು ಸುಧಾರಿಸಲು ಹಾಗೂ ಸಮಾನತೆ ತರುವಲ್ಲಿ ಪತ್ರಕರ್ತರ ಬರವಣಿಗೆ ಅತ್ಯಂತ ಪ್ರಮುಖವಾಗಿದೆ.ಆದರೆ ಇಂತಹ ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗದೇ ಇರುವುದು  ಬೇಸರದ ವಿಷಯವಾಗಿದೆ ಪತ್ರಕರ್ತರು ಆರ್ಥಿಕವಾಗಿ ಸದೃಢವಾದರೆ ಮಾತ್ರ ಸಮಾಜವನ್ನು ಪ್ರಬಲವನ್ನಾಗಿ ಮಾಡುವ ಶಕ್ತಿ ಬರುತ್ತದೆ  ಇದರಿಂದಾಗಿ ಇವರಿಗೆ ಸರ್ಕಾರದಿಂದ ಸೌಲಭ್ಯಗಳು ಮತ್ತು ಮಾಶಾಸನ ಕಲ್ಪಿಸಿಕೊಡಬೇಕು ಎಂದು ಡಿಎಸ್ಎಸ್ ಜಿಲ್ಲಾ ಅಧ್ಯಕ್ಷ  ಬಿ. ಮರಿಸ್ವಾಮಿ ಯವರು  ಹೇಳಿದರು
ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕ ರಂಗವು ವಸ್ತು ನಿಷ್ಠೆಯ ಸುದ್ದಿಯ ಜೊತೆ ಜೊತೆಯಲ್ಲಿ
ಅಂಬೇಡ್ಕರ ಕೊಟ್ಟಂತ ಸಂವಿದಾನ ಅಡಿಯಲ್ಲಿ  ನೊಂದವರ ಬಾಳಿಗೆ ಶೋಷಿತ ವರ್ಗದವರಿಗೆ ಸುದ್ದಿ ಪ್ರಚಾರ ನೀಡಿ ಕಷ್ಟಕರ ಬಾಳಿಗೆ ಬೆಳಕಾಗಬೇಕು  ಹಾಗೂ ಸರ್ಕಾರವು ದಾರಿ ತಪ್ಪಿದಲ್ಲಿ ಪಕ್ಷ ಪಾತ ಮಾಡದೇ ಸರ್ಕಾರವನ್ನು ಎಚ್ಚರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಮತ್ತು ತಗ್ಗಿನಕೇರಿ ಹುಲಿಗೇಶ್ ಪತ್ನಿಗೆ     ಹಾಗೂ ಉತ್ತಂಗಿ  ಹೇಮಣ್ಣ ಪತ್ನಿಗೆ ಪಟ್ಟಣ ಪಂಚಾಯಿತಿ ಅಥವಾ ಅಂಗನವಾಡಿ ಕೇಂದ್ರದಲ್ಲಿ  ಸಹಾಯಕಿಯಾಗಿ  ಯಾವುದಾದರೂ ಒಂದು ಕೆಲಸ ಕೊಟ್ಟರೆ.ಕುಟುಂಬ ನಡೆಸಲು ಅನುಕೂಲವಾಗುತ್ತದೆ.ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಎಂದು ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಹೇಳಿದರು.
ಡೋಣೂರು  ಚಾನುಕೋಟಿ
ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ
ಅನಾಥರ ಮಾತೆಯಾದ ಉತ್ತಂಗಿ ರುದ್ರಮ್ಮ ಮತ್ತು  ಜನಪದ ಕಲಾವಿದರಾದ ಕಾಳಮ್ಮ ರವರನ್ನು ಹಾಗೂ
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ  ಸಂಜನಾ,  ವಿನಯ್,  ಪವಿತ್ರ, ಛತ್ರಪತಿ , ಇವರುಗಳನ್ನು ಸನ್ಮಾನಿಸಲಾಯಿತು
ಈ  ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾರತಿ ಸುಧಾಕರ್ ಪಾಟೀಲ್, ತೋಟದ ರಾಮಣ್ಣ ,
ಜಿಲ್ಲಾ ಪತ್ರಕರ್ತರಾದ  ಭೀಮಣ್ಣ , ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ. ಶಫಿ, ಕೆ. ಕೊಟ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ, ಪ್ರಾಸ್ತವಿಕ ನುಡಿ ಉಜ್ಜಿನಿ ರುದ್ರಪ್ಪ, .
ಸ್ವಾಗತ.  ನಾಗರಾಜ್, ಗುರುಪ್ರಸಾದ್ ನಿರೂಪಿಸಿ ವಂದಿಸಿದರು, ಎಸ್ ಪ್ರಕಾಶ್ .ಡಿ ಸಿದ್ದಪ್ಪ ಉಪಾಧ್ಯಕ್ಷ.ಬಿ ಮಂಜುನಾಥ್ ಪ್ರಧಾನ ಕಾರ್ಯದರ್ಶಿ. ಕೆಎಂ ಚಂದ್ರಶೇಖರ್ ಜೀ ಸೋಮಶೇಖರ್ .ದೇವರಮನಿ ಸುರೇಶ್.ಎಂ  ರವಿಕುಮಾರ್ . ವಿಜಯಕುಮಾರ್ .ವೈ ಹರ್ಷವರ್ಧನ್.ಎಲ್ಲ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು