ಪತ್ರಕರ್ತರಿಗೆ ಕೋವಿಡ್ ಪ್ಯಾಕೆಜ್ ಜಾರಿ ಮಾಡಿ.

ಹರಪನಹಳ್ಳಿ,: ಕರೋನಾ ಮಹಾಮಾರಿ ಯಿಂದ ಲಾಕ್ ಢೌನ್ ಆದ ಹಿನ್ನಲೆಯಲ್ಲಿ  ಆರ್ಥಿಕ ಸಂಕಷ್ಟದಲ್ಲಿರುವ ತಾಲೂಕಿನ ಪತ್ರಕರ್ತರಿಗೆ  ಸರ್ಕಾರದ ಯಾವುದಾದರೂ ಯೋಜನೆಯಡಿ ವೈಯಕ್ತಿಕವಾಗಿ ಕೋವಿಡ್ ಪ್ಯಾಕೇಜ್ ನೀಡುವಂತೆ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಇಲ್ಲಿಯ ಶಾಸಕರು ಹಾಗೂ ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಪ್ರಭಾರಿ ಅಧ್ಯಕ್ಷ ಟಿ.ಬಿ.ರಾಜು ಹಾಗೂ ಕಾರ್ಯದರ್ಶಿ ತಳವಾರ ಚಂದ್ರಪ್ಪ ನವರು  ರಾಜ್ಯ ಸರ್ಕಾರ ಪತ್ರಕರ್ತರನ್ನು  ಈ ಸಂದರ್ಭದಲ್ಲಿ  ಪ್ರಂಟಲೈನ್ ಕೋರೋನಾ ವಾರಿಯರ್ಸ್ ಗಳೆಂದು ಘೋಷಿಸಿದೆ.ಆದರೆ ಈ ಘೋಷಣೆ ಲಸಿಕೆಗೆ ಮಾತ್ರ ಸೀಮಿತಗೊಳಿಸಿದ್ದು, ಯಾವುದೇ ಆರ್ಥಿಕ ಸಹಾಯ ಸಿಕ್ಕಿಲ್ಲ. ಪತ್ರಕರ್ತರ ಬದುಕು ಕಷ್ಟಕರವಾಗಿದೆ, ಆದ್ದರಿಂದ ಪತ್ರಕರ್ತರಿಗೆ ಕನಿಷ್ಟ 10 ಸಾವಿರ ರೂಪಾಯಿಗಳ ಕೋವಿಡ್ ಸಹಾಯ ಧನವನ್ನು  ಬಳ್ಳಾರಿಯ ಡಿಎಂಎಪ್ ಪಂಢ್ ನಿಂದ ಅಥವಾ ಸರ್ಕಾರದ ಯಾವುದೇ ಯೋಜನೆಯಿಂದ ಭರಿಸಿ ನೀಡಬೇಕಾಗಿ ಎಂದು ಕೋರಿದ್ದಾರೆ.