ಪತ್ರಕರ್ತರಿಗೆ ಕೊವ್ಯಾಕ್ಷಿನ ಲಸಿಕೆ: 3ನೇ ಅಲೆ ತಪ್ಪಿಸಲು ಮುಂಜಾಗ್ರತಾ ಕ್ರಮ : ಡಾ.ಗುತ್ತೆದಾರ.

(ಸಂಜೆವಾಣಿ ವಾರ್ತೆ)
ಶಹಾಪುರ:ಜೂ.6:ಮುಂಬರುವ ದಿನಮಾನಗಳಲ್ಲಿ ಮೂರನೆಯ ಅಲೆಯಿಂದ ಪಾರಾಗಲು ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳತ್ತಿದ್ದು. ಮಕ್ಕಳ ಮೇಲೆ ಕೊರೊನಾ ಕರಿ ನೇರಳು ಬೀಳದಂತೆ ತಾಲೂಕಿನಲ್ಲಿ ಮಕ್ಕಳಿಗಾಗಿ ಪ್ರತೇಕ ವಾರ್ಡಗಳ ಸಿದ್ದತೆಯಲ್ಲಿ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿದೆ. ಕೊವಿಡ್ ಲಸಿಕೆ ಹಾಕಿಕೊಳ್ಳಲು ಜನರು ಸಾಲುಗಟ್ಟುತ್ತಿದ್ದು. ಸಮಪರ್ಕವಾಗಿ ಜಾಗ್ರತಿ ಮೂಡಿದೆ. ಕಳೆದ ಏರಡು ದಿನಗಳಲ್ಲಿ 6 ಸಾವಿರಕ್ಕೂ ಅಧಿಕ ಜನರು ವ್ಯಾಕ್ಷಿನ ಹಾಕಿಕೊಂಡಿದ್ದಾರೆ. ಕೊರಾನ್ ಮಾಹಾಮಾರಿಯಿಂದ ಪಾರಾಗಲು ಸರ್ವರು ಲಸಿಕೆ ಹಾಕಿಕೊಳ್ಳಬೇಕಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ ಗುತ್ತೆದಾರವರು ಕರೆ ನೀಡಿದರು.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಏರಡನೆಯ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೆ ಸರ್ಕಾರಿ ಆಸ್ಪತ್ರೆಯಲ್ಲಿ 60 ಬೆಡ್ ಗಳ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗಾಗಿ 100 ಹಾಸಿಗೆಗಳ ತಯ್ಯಾರಿಯಲ್ಲಿ ಚಿಂತನೆ ನೆಡೆದಿದೆ. ತಾಲೂಕಿನ 10 ವ್ಯಾಕ್ಷಿನ ತಂಡಗಳು ಸೂಕ್ತವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಪ್ರತಿ ತಂಡ 200 ಜನರಿಗೆ ಲಸಿಕೆ ಹಾಕುವ ಗುರಿಯನ್ನು ಸಾಧಿಸಿಕೊಳ್ಳಲು ಗ್ರಾಮಿಣ ಪ್ರದೇಶಗಳಲ್ಲಿ ಬೀಡಾರ ಹಾಕಿದ್ದಾರೆ. ಪ್ರತಿ ತಂಡಗಳಲ್ಲಿ ಆರೋಗ್ಯ, ಅಂಗವನಾಡಿ, ಆಶಾ ಕಾರ್ಯಕರ್ತರು ಮತ್ತು ಗ್ರಾ.ಪಂ ಸಿಬ್ಬಂದಿಯವರು ಸೇರಿದ್ದಾರೆ. 18 ವರ್ಷದ ಪ್ರತಿಯೊಬ್ಬರಿಗೂ ವ್ಯಾಕ್ಷಿನ ಹಾಕಲಾಗುತ್ತಿದ್ದು, ಮುಂದೆ 17ಕ್ಕಿಂತ ಅಡಿಮೆ ವಯಸ್ಸಿನ ಮಕ್ಕಳಿಗೆ ವ್ಯಾಕ್ಷಿನ ಹಾಕುವ ಗುರಿ ಹೊಂದಲಾಗಿದೆ, ಈ ನಿಟ್ಟಿನಲ್ಲಿ ಜನಸಾಮಾನ್ಯರು. ಸಂಘ ಸಂಸ್ಥೆ ಪ್ರತಿನೀಧಿಗಳು ಸಹಕಾರ ನೀಡಿ ಕೊವಿಡ್ ಮಾರಕ ರೋಗದ ಮುಕ್ತಿಗೆ ಮುಂದಾಗಬೇಕು ಎಂದು ವಿವರ ನೀಡಿದರು.
ಈ ಸಮಯದಲ್ಲಿ ನಗರ ಅಶ್ರೆಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರುಪುರಕರ್, ನಗರ ಆಯುಷ್ ವೈಧಾಧಿಕಾರಿಗಳಾದ ಡಾ.ಶೀಮಾ, ಹಿರಿಯ ಆರೋಗ್ಯ ಅಧಿಕಾರಿಗಳಾದ ಮಲ್ಲಪ್ಪ ಕಾಂಬಳೆ, ಪ್ರೆಮೀಳಾ ಜಾನ್, ಆರೋಗ್ಯ ನೀರಿಕ್ಷಕರಾದ ಚಂದ್ರಶೇಖರ, ಕು.ದೀಪಾ, ಭೀಮಣ್ಣ, ಚಂದು, ನಿಂಗಣ್ಣ ಪುರ್ಲೆ, ಸ್ಟಾಫ್ ನರ್ಸಗಳಾದ ನಿರ್ಮಲಾ, ವಾಣೀಶ್ರೀ, ಅಂಬಾದೇವಿ, ಯಂಕಮ್ಮ, ಸಂತೋಷ, ನಿರ್ಮಲ, ವಿಜಯಲಕ್ಷಿ, ಅಂಬಿಕಾ ರಡ್ಡಿ, ರತ್ನಮ್ಮ, ಸೋಮಶೇಖರ, ಭೀಮರಾಯ, ಲ್ಯಾಬ್ ಟೆಕ್ನಿಸನ್ ಅಮೀತಾ, ಪಾರ್ಮಸಿಷ್ಟರಾದ ಮಹಮ್ಮದ್ ಗೌಸ್, ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.