ಪತ್ರಕರ್ತರಿಗೆ ಕಿಟ್ ವಿತರಣೆ

ಬಾದಾಮಿ,ಜೂ1: ಬರುವ ಜೂ.9 ರಂದು ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀದೇವಿ ಅವತರಿಸಿದ ದಿನವಿದೆ. ಅಂದು ಕೋವಿಡ್ ವಾರಿಯರ್ಸಗಳಿಗೆ ಆಹಾರ ಧಾನ್ಯಗಳ ಕಿಟ್‍ನ್ನು ವಿತರಿಸಲು ದೇವಸ್ಥಾನ ಟ್ರಸ್ಟ ಕಮೀಟಿ ನಿರ್ಧರಿಸಿದೆ ಎಂದು ಟ್ರಸ್ಟಿ ಮಹೇಶ ಪೂಜಾರ ತಿಳಿಸಿದರು.
ಅವರು ನಗರದ ಕಾನಿಪ ಭವನದಲ್ಲಿ ಪತ್ರಕರ್ತರಿಗೆ ಕಿಟ್ ವಿತರಿಸಿ ಮಾತನಾಡಿ ಕಳೆದೆರಡು ವರ್ಷದಿಂದ ಕೊರೊನಾ ಮಹಾಮಾರಿಯಿಂದ ಹಲವಾರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತ ಬರಲಾಗಿದೆ. ಹೀಗಾಗಿ ಟ್ರಸ್ಟ ಕಮೀಟಿ ವತಿಯಿಂದ ಸಾಮಾಜಿಕ ಸೇವೆ ಮಾಡುತ್ತಾ ಕೈಲಾದಷ್ಟು ಸೊಂಕಿತರಿಗೆ, ವಾರಿಯರ್ಸಗೆ ನೆರವು ನೀಡಲಾಗುತ್ತಿದೆ ಎಂದರು.
ಟ್ರಸ್ಟ್ ಕಮೀಟಿಯ ಚೇರಮನ್ ಮಲ್ಲಾರಭಟ್ಟ ಪೂಜಾರ, ವಿದ್ಯಾನಂದ, ರಮೇಶ, ಅರವಿಂದ, ಮಾಲತೇಶ, ಶಂಕರ, ಸಾಗರ, ಮಾರ್ತಂಡಭಟ್ಟ, ಅಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.