ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ವಿತರಣೆ

ಹೊನ್ನಾಳಿ.ಜೂ.೬; ನಿಮ್ಮ ಲೇಖನಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಇರಬೇಕೆ ಹೊರತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದಕ್ಕೆ ಪ್ರಚೋಧನೆ ನೀಡುವ ಲೇಖನಿಯಾಗಬಾರದು ಎಂದು ಡಿವೈಎಸ್ಪಿ ಸಂತೋಷ್ ಹೇಳಿದರು.ಹೊನ್ನಾಳಿ ಪೊಲೀಸ್‌ಠಾಣೆಯಲ್ಲಿ ಫ್ರಂಟ್‌ಲೈನ್ ವರ್ಕರ್‌ಗಳಾದ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.ಜಾತಿ ಸಂಘರ್ಷ,ಗುಂಪುಗಲಭೆ ಹಾಗೂ ಕೋಮು ಘರ್ಷಣೆಗಳು ನಡೆದಾಗ ಪತ್ರಕರ್ತರು ತಮ್ಮ ಸುದ್ಧಿ ಮೂಲಕ ಗಲಭೆಗಳು ಆಗುವುದನ್ನು ತಪ್ಪಿಸಬಹುದು ಅಂತಹ ಅಂತಃಕರಣ ಪತ್ರಕರ್ತರಲ್ಲಿ ಇದೆ ಆದ್ದರಿಂದಲ್ಲೇ ಪತ್ರಕರ್ತರನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದು ವಿಶ್ವದ ಎಲ್ಲರು ನಿಮ್ಮನ್ನು ಗೌರವಿಸುತ್ತಾರೆ ಎಂದು ಹೇಳಿದರು.ಇನ್ನೂ ಬಹುಮುಖ್ಯವಾಗಿ ಪತ್ರಕರ್ತರು ಕರೋನಾ ಸಂಕಷ್ಟದಲ್ಲಿ ಸಾವುನೋವು ಹಾಗೂ ಅಂಖ್ಯೆ ಸಂಖ್ಯೆಗಳ ಮಾಹಿತಿ ನೀಡುವುದಲ್ಲದೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಅನೇಕ ಸುದ್ದಿಗಳನ್ನು ಸಾರ್ವಜನಿಕರಿಗೆ ನೀಡಿ ತಮ್ಮ ಕಳಕಳಿಯನ್ನು ಮೆರೆಯುತ್ತಿದ್ದಾರೆ ಎಂದರು.ಸಿಪಿಐ ದೇವರಾಜ್ ಮಾತನಾಡಿ ಸಮಾಜದಲ್ಲಿ ಪತ್ರಕರ್ತರಿಗೆ ವಿಶೇಷವಾದ ಗೌರವ ಇದೆ,ಆದರೆ ಅವರಿಗೆ ಬರುವ ಗೌರವಧನ ಮಾತ್ರ ಕುಟುಂಬ ನಿರ್ವಹಣೆ ಮಾಡುವುದಕ್ಕೂ ಸಾಕಾಗುವುದಿಲ್ಲ ಆದರೂ ಸಮಾಜಿಕ ಜವಬ್ದಾರಿ ಅರಿತು ಕೆಲಸ ಮಾಡುತ್ತರುವ ಪತ್ರಕರ್ತರು ನಮ್ಮೆಲ್ಲರಿಗೂ ಪ್ರೇರಣೆ, ಇನ್ನೂ ಅವಳಿ ತಾಲೂಕಿನಲ್ಲಿ ಕ್ರೆöÊಂಗಳು ನಡೆದರೆ ಬೇಕಾಬಿಟ್ಟಿ ಸುದ್ದಿ ಮಾಡದೆ ನಮ್ಮ ಬಳಿ ಎಲ್ಲ ವಿಚಾರಗಳನ್ನು ಪಡೆದು ಅದರ ಸಾಧಕ ಬಾಧಕಗಳನ್ನು ನಮ್ಮ ಬಳಿ ಚರ್ಚಿಸಿ ಸುದ್ದಿ ಮಾಡುತ್ತಿರುವುದು ಪೊಲೀಸ್ ಇಲಾಖೆಗೆ ಸಹಕಾರಿಯಾಗಿದ್ದಾರೆ ಎಂದರು.ಪತ್ರಕರ್ತ ಶ್ರೀನಿವಾಸ್ ಮಾತನಾಡಿದರು.ಪಿಎಸೈ ಬಸವನಗೌಡ ಬಿರಾದರ್,ನ್ಯಾಮತಿ ಪಿಎಸೈ ರಮೇಶ್, ಪ್ರಬೇಷನರಿ ಪಿಎಸೈ ಕಾಂತರಾಜ್,ಸಿಬ್ಬಂಧಿಗಳಾದ ಹರೀಶ್,ವೆಂಕಟೇಶ್,ನಾಗರಾಜ್,ರಮೇಶ್, ಪತ್ರಕರ್ತರಾದ ಷಕೀಲ್,ಅರುಣ್‌ಕುಮಾರ್,ಕೃಷ್ಣಮೂರ್ತಿ,ಪವನ್,ಮಲ್ಲೇಶ್ ಮಾಳಕ್ಕಿ,ಅರವಿಂದ್ ಹಾಗೂ ಸುರೇಶ್ ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.