ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

??????

ದೇವದುರ್ಗ.ಜೂ.೧೦- ಕೊರೊನ ತಡೆಗೆ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹೋಬಳಿ ಹಾಗೂ ತಾಲೂಕು ಪತ್ರಕರ್ತರಿಗೆ ಗುತ್ತಿಗೆದಾರ ಮೌಲಾಸಾಬ್ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿತರ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗುರುವಾರ ೨೫ಕೆಜಿ ಅಕ್ಕಿ ಪಾಕೇಟ್ ವಿತರಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ದುಡಿಯುವ ವಿವಿಧ ವಲಯದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಕಾರ್ಯನಿರತ ಪತ್ರಕರ್ತರೂ ಹೊರತಲ್ಲ. ಸ್ಥಳೀಯ ಪತ್ರಕರ್ತರಿಗೆ ಯಾವುದೇ ಗೌರವದನ ಬರುತ್ತಿಲ್ಲ. ಕೆಲ ಕಡೆ ಗೌರವಧನ ನೀಡುತ್ತಿದ್ದರೂ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ದುಡಿಯವ ವರ್ಗದಲ್ಲಿ ಪತ್ರಕರ್ತರೂ ಸೇರಿದ್ದಾರೆ.
ಹಲವರು ಗೌರವಧನ ಲೆಕ್ಕಿಸದೆ ಸಮಾಜಸೇವೆ ದೃಷ್ಟಿಯಿಂದ ಕರೊನಾ ಸಂಕಷ್ಟ ಸಮಯದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಸುದ್ದಿ ಮುಟ್ಟಿಸುತ್ತಿದ್ದಾರೆ. ಹಲವರು ಕರೊನಾಗೆ ಬಲಿಯಾಗಿದ್ದಾರೆ. ಇಂಥ ಸಂಕಷ್ಟ ಸಮಯವನ್ನು ಅರಿತ ಗುತ್ತಿಗೆದಾರ ಮೌಲಾಸಾಬ್ ಪತ್ರಕರ್ತರಿಗೂ ೨೫ಕೆಜಿ ಅಕ್ಕಿ ವಿತರಣೆ ಮಾಡಿದ್ದಾರೆ. ಇದು ಉತ್ತಮವಾದ ಕಾರ್ಯವಾಗಿದೆ ಎಂದು ಹೇಳಿದರು.
ಈಸಂದರ್ಭದಲ್ಲಿ ನಂತರ ತಾಲೂಕು, ಹೋಬಳಿಯ ೪೭ ಪತ್ರಕರ್ತರಿಗೆ ೨೫ಕೆಜಿ ಅಕ್ಕಿ ಪಾಕೇಟ್ ವಿತರಿಸಲಾಯತು. ಹಿರಿಯ ಪತ್ರಕರ್ತರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ನರಸಿಂಗರಾವ್ ಸರ್ಕೀಲ್, ಮೈನುದ್ದೀನ್ ಕಾಟಮಳ್ಳಿ, ಪ್ರಧಾನ ಕಾರ್ಯದರ್ಶಿ ಬಾಬುಅಲಿ ಕರಿಗುಡ್ಡ, ಗಿರಿಯಪ್ಪ ಪೂಜಾರಿ, ಅಲಿಬಾಬ ಪಟೇಲ್, ಸುರೇಶಗೌಡ, ನಾಗರಾಜ ಸುಟ್ಟಿ, ನಾಗರಾಜ ತೇಲ್ಕರ್ ವಿರಪಾಕ್ಷಿ ಆನಂದ ಗುಡಿ, ಗುರುನಾಥ ಇಂಗದಾಳ,ಸೇರಿದಂತೆ ಇತರರಿದ್ದರು.