ಪತ್ರಕರ್ತರಿಗೆ ಆಹಾರಕ್ಕೆ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ.ಮೇ.೨೭ ಪತ್ರಕರ್ತರು ನನಗೆ ಸ್ನೇಹಿತರಿದ್ದ ಹಾಗೆ ಅವರ ಕಷ್ಟಕ್ಕೆ ನಾನು ಯಾವಾಗಲೂ ಸ್ಪಂದಿಸುತ್ತೇನೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಮರಿ ರಾಮಪ್ಪ ಹೇಳಿದರು.
ಪಟ್ಟಣದಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯರಿಗೆ ಆಹಾರಕ್ಕೆ ಕಿಟ್ ವಿತರಿಸಿ ಮಾತನಾಡಿ ಕೋರೋನ ಎರಡನೇ ಅಲೆಯಿಂದ ಜನರ ಜೀವನ ಕಷ್ಟಕರವಾಗಿದೆ ಇಂತಹ ಸಮಯದಲ್ಲಿ ಪತ್ರಕರ್ತರು ಕಷ್ಟದಲ್ಲಿದ್ದಾರೆ ಎಂದು ಗುರುತಿಸಿ ಅವರಿಗೆ ನನ್ನಿಂದ ಅಳಿಲು ಸೇವೆಯನ್ನು ತೆಗೆದುಕೊಳ್ಳಬೇಕೆಂದು ವಿನಂತಿ ಸಿದರು.
ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್, ಸರ್ಕಾರ ಪತ್ರಕರ್ತರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿ ಕೈತೊಳೆದುಕೊಂಡಿದೆ ಆದರೆ ಪತ್ರಕರ್ತರಿಗೆ ಯಾವುದೇ ಭದ್ರತೆ ಮತ್ತು ಸಹಾಯ ನೀಡದೇ ಇರುವುದು ದುರಾದೃಷ್ಟಕರ ಆದರೆ ಮರಿ ರಾಮಪ್ಪ ಅಂತಾ ದಾನಿಗಳು ಇರುವುದರಿಂದ ಪತ್ರಕರ್ತರಿಗೆ ಕಿಟ್ಟು ನೀಡುತ್ತಿರುವುದು ಸಂತೋಷವಾಗಿದೆ ಎಂದರು.
ಹಿರಿಯ ಪತ್ರಕರ್ತ ಹಿಮ ಗುರುಬಸವರಾಜ್ ಅಕಾಲಿಕ ಮರಣಕ್ಕೆ ಐದು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಟುಗನಹಳ್ಳಿ ಕೊಟ್ರೇಶ, ಪವಾಡಿ ಹನುಮಂತಪ್ಪ, ನೆಲ್ ಇಸ್ಮಯಿಲ್, ಕುರಿ ನಾಗರಾಜ್ ಇತರರು ಇದ್ದರು.