ಪತ್ರಕರ್ತರಿಗೆ ಆಹಾರಕಿಟ್ ಜೊತೆ ಆಕ್ಸಿಮೀಟರ್ ವಿತರಣೆ

ಹಗರಿಬೊಮ್ಮನಹಳ್ಳಿ:ಜೂ.10 ನಮ್ಮ ಮಾದ್ಯಮ ಮಿತ್ರರು ಹಗಲು ರಾತ್ರಿ ಎನ್ನದೆ 24 ತಾಸು ಕೆಲಸ ಮಾಡುತ್ತಿದ್ದಾರೆ ಆದರೆ ಅವರಿಗೆ ಯಾವುದೇ ಭದ್ರತೆ ಇಲ್ಲ ಎಂದು ನಗರ ಹಾಗೂ ಗ್ರಾಮೀಣಭಿವೃದ್ದಿ ಅಮ್ಮ ಸಂಸ್ಥೆಯ ಸಂಸ್ಥಾಪಕರಾದ ಶಾಹೀರಾಬಾನು ಅವರು ಹೇಳಿದರು.
ಪಟ್ಟಣದ ಸೋನಿಯ ಗಾಂಧೀನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ತಮ್ಮ ಪತಿ ದಿವಂಗತ ಶರೀಫ್ ಸಾಹೇಬ್ ಅವರ 2ನೇ ವರ್ಷದ ಪುಣ್ಯತಿಥಿಯ ಸ್ಮರಣಾರ್ಥವಾಗಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರಕಿಟ್ ಮತ್ತು ಆಕ್ಸಿಮೀಟರ್ ವಿತರಿಸಿ ಮಾತನಾಡಿ ಪತ್ರಕರ್ತರಿಗೂ ಜೀವನ ಇದೆ ಜೀವನ ನಿರ್ವಹಣೆ ಇದೆ ಅವರನ್ನೇ ನಂಬಿದ ಕುಟುಂಬ ವರ್ಗ ಇದೆ ಯಾವುದೇ ರೀತಿಯ ಸಂಬಳವಿಲ್ಲ ಯಾವುದೇ ರೀತಿಯ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದ ಸರ್ಕಾರದ ಕ್ರಮ ಸರಿಯಲ್ಲ. ಪತ್ರಕರ್ತರು ಮುಂಜೂಣಿಯ ಕೊರೊನಾ ವಾರಿಯರ್ಸ್ ಹೇಳುವ ಸರ್ಕಾರ ಸಂಕಷ್ಟ ಕಾಲದಲ್ಲಿ ಯಾವುದೇ ರೀತಿಯ ಪರಿಹಾರ ನೀಡದಿರುವುದು ದುರದೃಷ್ಟಕರ. ಜನರ ಮದ್ಯ ಕಾರ್ಯನಿರ್ವಹಿಸುವ ಪತ್ರಕರ್ತರ ಆರೋಗ್ಯದ ಕಾಳಜಿಯಿಂದ ಆಹಾರ ಕಿಟ್ ಜೊತೆಗೆ ಆಕ್ಸಿಮೀಟರನ್ನು ನೀಡುತ್ತಿದ್ದು ಇದು ನನ್ನ ಅಳಿಲು ಸೇವೆಯಾಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಹಲವಾರು ಜನ ಶ್ರೀಮಂತರಿದ್ದು ಸೇವೆ ಮಾಡುವ ಮನಸ್ಸು ಎಲ್ಲಾರಿಗೂ ಬರುವುದಿಲ್ಲ ಪತ್ರಕರ್ತರ ನೋವಿನ ಜೀವನ ಅರ್ಥ ಮಾಡಿಕೊಂಡು ಪತ್ರಕರ್ತರ ಸೇವೆ ಗುರುತಿಸಿ ಪತ್ರಕರ್ತರಿಗೆ ಆಹಾರ ಕಿಟ್ ನೀಡಿದ್ದಾರೆ ಆರೋಗ್ಯದ ಕಾಳಜಿ ಅರ್ಥ ಮಾಡಿಕೊಂಡು ಆಕ್ಸಿಮೀಟರ್ ನೀಡಿರುವುದು ಅತ್ಯಂತ ಸಂತೋಷದ ವಿಷಯ ಶಾಯಿರಾಬಾನು ಅಕ್ಕ ಅವರ ಕುಟುಂಬ ವರ್ಗ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಗೌರವ ಸಿಗಲಿ ಅವರ ಸಮಾಜಸೇವೆ ಜೊತೆ ನಾವು ಇರುತ್ತೇವೆ ಎಂದರು. ಹಿರಿಯ ಪತ್ರಕರ್ತರಾದ ಜೆ ನಾಗರಾಜ್ ಮಾತನಾಡಿದರು
.ಈಸಂದರ್ಭದಲ್ಲಿ ಕುಟುಂಬ ವರ್ಗದ ಅಬು, ಆಸ್ಮಾ ,ನಜ್ಮಾ ,ಫರೂಕ್,ಅರ್ಪಿಯಾನಾಜ್,ಆಲಿಶಾ,ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.