ಪತ್ರಕರ್ತರಿಗೂ ಪ್ಯಾಕೇಜ್ ಕೊಡಲಿ-ಕರೆಮ್ಮ

ಗಬ್ಬೂರು.ಜೂ.೦೭-ಸಾರ್ವಜನಿಕ ರಂಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳು ಸಾಕಷ್ಟು ಸಂಕಷ್ಟದಲ್ಲಿದ್ದು, ಸರ್ಕಾರ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ದೇವದುರ್ಗ ತಾಲೂಕು ಜೆಡಿಎಸ್ ಮಹಿಳಾ ಮುಖಂಡಳಾದ ಕರೆಮ್ಮ ಜಿ. ನಾಯಕಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊರೋನಾ(ಕೋವಿಡ್-೯) ಎರಡನೇ ಅಲೆಯು ವೇಗವಾಗಿ ಹಬ್ಬುತ್ತಿದ್ದು, ರಾಜ್ಯ ಹಾಗೂ ದೇಶಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ.ಇದಕ್ಕೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿತು.ಇದರಲ್ಲಿ ಬೀದಿಬದಿ ವ್ಯಾಪಾರಸ್ಥರು, ಹೂಬೆಳೆಗಾರರು, ಕಮ್ಮಾರರು, ಚಮ್ಮರಾರು,ಆಟೋ ಚಾಲಕರು, ಕ್ಯಾಬ್ ಡೈವರ್, ಕೂಲಿ ಕಾರ್ಮಿಕರಿಗೆ ಇನ್ನೂ ಹಲವಾರು ವ್ಯಾಪಾರಸ್ಥರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.ಅದೇ ರೀತಿ ತಮ್ಮ ಜೀವದ ಹಂಗು ತೊರೆದು ಸಂಬಳವಿಲ್ಲದೆ ಸಮಾಜ ಸೇವೆ ಕೆಲಸ ಮಾಡುತ್ತಿದ್ದು, ಅವರಿಗೂ ಸರ್ಕಾರ ಕೂಡಲೇ ಘೋಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಪತ್ರಕರ್ತರಿಗೆ ಪ್ಯಾಕೇಜ್ ಘೋಷಣೆ ಮಾಡದೆ ಇರುವುದು ಪತ್ರಿಕಾ ಧರ್ಮಕ್ಕೆ ದ್ರೋಹ ಬಗೆದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರಿಗೆ ಮತ್ತು ದೃಶ್ಯ ಮಾಧ್ಯಮದವರಿಗೆ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಲಾಗಿದೆ. ಕೊನೆಯ ಪಕ್ಷ ಯೋಗಕ್ಷೇಮಕ್ಕಾದರೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ದೇವದುರ್ಗ ತಾಲೂಕು ಜೆಡಿಎಸ್ ಮುಖಂಡಳಾದ ಕರೆಮ್ಮ ಜಿ. ನಾಯಕಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.