ಪತ್ರಕರ್ತರಿಂದ ಸತ್ಯದ ಅನಾವರಣ ಕಾರ್ಯವಾಗಲಿ: ಪ್ರೋ. ಗುಡಸಿ


ಧಾರವಾಡ ಮಾ.24: ಪತ್ರಕರ್ತರು ಸತ್ಯದ ಮಾಹಿತಿ ನೀಡುವ ಕೆಲಸ ಮಾಡಬೇಕು. ಆದರೆ ಇಂದು ಕೆಲ ಪತ್ರಕರ್ತರು ವಕೀಲರಂತೆ ವಾದಿಸುವ, ನ್ಯಾಯಾಧೀಶರಂತೆ ನಿರ್ಣಯಿಸುವ ಕೆಲಸ ಮಾಡುತ್ತಿದ್ದುದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ಸಂವಹನ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುದ್ದಿಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳವ ಕೆಲಸವನ್ನು ಓದುಗರು ಮಾಡುತ್ತಾರೆ. ಅದನ್ನು ಪತ್ರಕರ್ತ ಮಾಡಬೇಕಿಲ್ಲ. ಯಾವುದೇ ಮಾಹಿತಿ ಪ್ರಕಟಿಸುವ ಪೂರ್ವದಲ್ಲಿ ಅದರ ಸತ್ಯಾಸತ್ಯತೆ ಪರೀಶಿಲಿಸುವ ಕೆಲಸವಾಗಬೇಕು ಎಂದು ಹೇಳಿದರು. ಪತ್ರಕೋದ್ಯಮ ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಬೆಳಸಿಕೊಳ್ಳಬೇಕು. ವಿಶಾಲ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಂವಾದದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ದಿಲ್ಲಿ ಇನಶಾಟ್ಸ್ ಮೀಡಿಯಾ ಜನರಲ್ ಮ್ಯಾನೇಜರ ಸುಭಾಷ ಹೂಗಾರ ಮಾತನಾಡಿ, ಪತ್ರಿಕಾಕ್ಷೇತ್ರ ಏನೇ ಬದಲಾವಣೆಯಾದರೂ ಮೂಲ ತತ್ವ ಬದಲಾಗುವುದಿಲ್ಲ. ಸದ್ಯ ದೇಶದಲ್ಲಿ ಪತ್ರಿಕೋದ್ಯಮ ಕ್ಷೇತ್ರ ತೀವ್ರ ಗತಿಯಲ್ಲಿ ನೈತಿಕ ಅಧಪತನವಾಗುತ್ತಿದೆ. ಸದ್ಯದ ಹಾದಿ ಕಠಿಣವಾಗಿದೆ ಎಂದರು.
ಪತ್ರಿಕಾ, ಟಿ.ವಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಇಂದಿನ ಯುವ ಪತ್ರಕರ್ತರಿಗೆ ಭಾಷೆ ಜೊತೆಗೆ ತಂತ್ರಜ್ಞಾನ ಬಳಕೆ ಕೂಡ ಅಗತ್ಯವಿದೆ. ಸಂದರ್ಶನಗಳನ್ನು ಮಾಡುವ ಪೂರ್ವತಯಾರಿ, ಜನಪ್ರತಿನಿಧಿಗಳ ಜೊತೆಗೆ ಗೌರವದಿಂದ ಸಂವಹನ ಮಾಡುವುದು ಅಗತ್ಯ ಎಂದು ಹೇಳಿದ ಅವರು ತಮ್ಮ ವೃತಿ ಜೀವನದಲ್ಲಿ ಪ್ರಧಾನ ಮಂತ್ರಿ ಹಾಗೂ ಇತರಗಣ್ಯರ ಸಂದರ್ಶನದ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಪತ್ರಕರ್ತ ಸುಭಾಷ ಹೂಗಾರ ಅವರನ್ನು ವಿಭಾಗದ ವತಿಯಿಂದ ಕುಲಪತಿ ಪ್ರೊ.ಕೆ. ಬಿ. ಗುಡಸಿ ಅವರು ಸನ್ಮಾನಿಸಿದರು. ಕು.ಸುಜಾತಾ ಜೋಡಳ್ಳಿ ಸ್ವಾಗತಿಸಿದರು. ಡಾ. ಮಂಜುನಾಥ ಅಡಿಗಲ್ ಪರಿಚಯಿಸಿದರು. ವಿಭಾಗದ ಮುಖ್ಯಸ್ಥ ಪ್ರೊ.ಜೆ.ಎಂ. ಚಂದುನವರ ವಂದಿಸಿದರು. ಅವದಾನಿ ನಿರೂಪಿಸಿದರು. ಪತ್ರಕರ್ತರಾದ ಬಸವರಾಜ ಕಟ್ಟಿಮನಿ, ವಿಜಯ ಹೂಗಾರ, ನಿಜಗುಣಿ ದಿಂಡಲಕೊಪ್ಪ, ಮಲ್ಲಿಕಾರ್ಜುನ ಬಾಳಣ್ಣವರ, ವಿಜಯ ಪುಜಾರ, ಪ್ರಾಧ್ಯಾಪಕ ಪ್ರೊ. ಈಶ್ವರ ಬೈದಾರೆ ಕಾರ್ಯಕ್ರಮದಲ್ಲಿ ಪಾ¯ದÉ್ಗೂಂಡಿದ್ದರು.