ಪತ್ರಕರ್ತನ ಸಂತುಪನ್ ಬಂಧನಕ್ಕೆ ಖಂಡನೆ

(ಸಂಜೆವಾಣಿ ವಾರ್ತೆ)
ರಾಯಚೂರು, ಫೆ.೨೧-ಪಶ್ಚಿಮ ಬಂಗಾಳದ ಸಂದೇಶ ಕಾಲಿಯಲ್ಲಿ ರಿಪಬ್ಲಿಕ್ ಟಿವಿ ನ್ಯೂಸ್ ಚಾನಲ್‌ನ ವರದಿಗಾರ ಸಂತುಪನ್ ಅವರನ್ನು ಬಂಧಿಸಿರುವದನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಮತಾ ಬ್ಯಾನರ್ಜಿ ಸರಕಾರ ವಿರುದ್ಧ ಪತ್ರಕರ್ತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ತನ್ನದೆ ಆದ ಸ್ವಾತಂತ್ರ್ಯ ಇದೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕರ್ತವ್ಯ ನಿರತ ಪತ್ರಕರ್ತನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.
ಪತ್ರಕರ್ತರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿರುವದು ಅಘಾತಕಾರಿಯಾಗಿದೆ. ಪತ್ರಕರ್ತ ರಕ್ಷಣೆ ಕಾನೂನು ರೂಪಿಸಬೇಕು. ಮುಕ್ತ ಪತ್ರಿಕೊಧ್ಯಮಕ್ಕೆ ಅವಕಾಶ ನೀಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇರುವ ಸಮಿತಿ ನಿಯಮಿತ ಸಭೆ ನಡೆಸಬೇಕು ಎಂದು ಪತ್ರಕರ್ತ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್ ಗುರುನಾಥ, ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ದತ್ತು ಸರ್ಕಿಲ್, ಸತ್ಯನಾರಾಯಣ, ವೆಂಕಟೇಶ ಹೂಗಾರ, ಶಿವಪ್ಪ ಮಡಿವಾಳ, ವೀರಣ್ಣಗೌಡ, ದುರುಗೇಶ,ಗುಂಡಪ್ಪ, ಬಸವರಾಜ ನಾಗಡದಿನ್ನಿ, ರಂಗನಾಥ, ಎಂ ಪಾಷ ಹಟ್ಟಿ, ನೀಲಕಂಠ ಸ್ವಾಮಿ, ರಾಜು, ಹುಸೇನಪ್ಪ, ಭಾವಸಲಿ, ರಾಚಯ್ಯಸ್ವಾಮಿ, ವೀರೇಶ, ಜಯಕುಮಾರ ದೇಸಾಯಿ, ಅಬ್ದುಲ್ ಖಾದರ್, ಯಲ್ಲಪ್ಪ ಸೇರಿದಂತೆ ಇನ್ನಿತರ ಪತ್ರಕರ್ತ ಇದ್ದರು.