
ಮಾನ್ವಿ,ಮಾ.೦೯- ಲಿಂಗಸೂಗುರು ತಾಲೂಕಿನ ಮುದಗಲ್ ವಿಜಯವಾಣಿ ವರದಿಗಾರನ ಮೇಲೆ ಹಲ್ಲೆ ನಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಾಲೂಕ ತಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಸೀಲ್ ಕಛೇರಯಲ್ಲಿ ಗ್ರೇಟ್ ೨ ವಾಹಿದ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪಿ.ಪರಮೇಶ ಸುದ್ದಿಮೂಲ ವರದಿಗಾರ ಲಿಂಗಸೂಗುರು ತಾಲೂಕಿನ ಉಪ್ಪಾರ್ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಪೂರ ಹಟ್ಟಿ ಗ್ರಾಮದಲ್ಲಿ ವರದಿಗೆ ತೆರಳಿದ ಮುದುಗಲ್ ವಿಜಯವಾಣಿ ವರದಿಗಾರ ಶರಣಯ್ಯ ಒಡೆಯರ್ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಡಿ.ಎಸ್ ಹುಲಿಗೇರಿ ಬೆಂಬಲಿಗರಿಂದ ಹಲ್ಲೆ ನಡೆದಿದ್ದು, ಇದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಮಾನ್ವಿ ಉಗ್ರವಾಗಿ ಖಂಡಿಸುತ್ತೇದೆ.
ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಗ್ರಾಮೀಣ ಭಾಗದ ವರದಿಗಾರರಿಗೆ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದು ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚೆತ್ತುಕೊಂಡು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು.
ಈ ಸಂಧರ್ಭದಲ್ಲಿ ತಾಲಕ ಅಧ್ಯಕ್ಷ ಎಮ್ ಬಿ ಸಿದ್ದಿರಾಮಯ್ಯ ಸ್ವಾಮಿ, ಬಸವರಾಜ ಬೋಗವತಿ,ಶರಣಬಸವ ನೀರಮಾನವಿ, (ಹ್ಯಾರಿಸ್,) ಹನುಮಂತ ಕೊಟ್ನಕಲ್,ಮಾರೇಪ್ಪ ದೊಡ್ಡಮನಿ,ಲಕ್ಷ್ಮಣ ಕಪಗಲ್, ಗುಡಿ,ಶ ಗಯಾಸ್, ಜಲಾಲ್ ಶಾಸ್ತ್ರಿಕ್ಯಾಂಪ್, ಶಿವುಕುಮಾರ್ ಜಗ್ಲಿ, ನವೀನ್, ಬಸವ, ವಿಜಯ ಕಿರಣ ಇನ್ನಿತರರು ಇದ್ದರು.