ಪತ್ರಕರ್ತನಿಗೆ ಕೊಲೆ ಬೆದರಿಕೆ: ಸೂಕ್ತ ಕ್ರಮಕ್ಕೆ ಪತ್ರಕರ್ತರ ಮನವಿ

ಪಿರಿಯಾಪಟ್ಟಣ: ಮೇ.21: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ವರದಿ ಮಾಡಲು ತೆರಳಿದ್ದ ಪತ್ರಕರ್ತ ಟಿ.ಜೆ.ಆನಂದ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದ್ದಲ್ಲದೆ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಆನಂದ್ ವಿರುದ್ದ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಚಂದ್ರಮೌಳಿ ಅವರಿಗೆ ಗುರುವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಎನ್.ವಿಜಯ್ ಮಾತನಾಡಿ ಪತ್ರಕರ್ತ ಟಿ.ಜೆ,ಆನಂದ್ ಅವರಿಗೆ ಮೇ. 18 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ವಿತರಕರು ಇಲ್ಲದೆ ಔಷಧಿ ನೀಡುತ್ತಿಲ್ಲ ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ದೊರತಿದ್ದು ತಕ್ಷಣ ಆಸ್ಪತ್ರೆಗೆ ತೆರಳಿ ಪೆÇೀಟೋ ತೆಗೆದು ಕೊಂಡು ಔಷಧಿಗೆ ಸರತಿಸಾಲಿನಲ್ಲಿ ನಿಂತಿದ್ದ ರೋಗಿಗಳ ಹೇಳಿಕೆ ಪಡೆದುಕೊಳ್ಳುವ ಸಮಯಕ್ಕೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಅಲ್ಲಿಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಇಲ್ಲಿ ಸಮಸ್ಯೆ ಇಲ್ಲ ನೀನೆ ಸಮಸ್ಯೆ ಸೃಷ್ಠಿಸುತ್ತಿದ್ದೀಯ ನೀನು ಇಲ್ಲಿಂದ ಹೊರಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಹಾಕಿದ್ದಲ್ಲದೆ ಅಲ್ಲಿಂದ ತೆರಳದಂತೆ ಅಡ್ಡಗಟ್ಟಿ ಪೆÇಲೀಸರಿಗೆ ಕರೆ ಮಾಡಿದ್ದಾರೆ. ಈ ಸಮಯದಕ್ಕೆ ದಲಿತ ಸಂಘಟನೆಯ ಮುಖಂಡರಾದ ಅಣ್ಣಯ್ಯ, ಪಿ.ಪಿ.ಮಹದೇವ್ ಮತ್ತು ಇತರರು ಸಹ ಸ್ಥಳಕ್ಕೆ ಬಂದು ಆಡಳಿತಾಧಿಕಾರಿಯನ್ನು ಪ್ರಶ್ನಿಸಿದ್ದಾರೆ ಈ ವಿಷಯ ಕೆಲವು ದಿನಪತ್ರಿಕೆಗಳಲ್ಲಿ ಸಹ ವರದಿಯಾಗಿದೆ, ಸ್ಥಳಕ್ಕೆ ಬಂದ ಪೆÇಲೀಸರು ಡಾ.ಶ್ರೀನಿವಾಸ್ ಗೆ ಬುದ್ದಿ ಮಾತು ಹೇಳಿ ಪತ್ರಕರ್ತರ ಕೆಲಸಕ್ಕೆ ಅಡ್ಡಿಮಾಡುವುದು ತಪ್ಪು ಮತ್ತು ಸಕಾಲದಲ್ಲಿ ಔಷಧಿ ವಿತರಿಸಲು ಕ್ರಮಕೈಗೊಳ್ಳುವಂತೆ ತಿಳಿಸಿ ಸ್ಥಳದಿಂದ ಹೊರಟಿದ್ದಾರೆ ಎಂದರು. ಈ ಘಟನೆಯಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ನ ದೃಶ್ಯವನ್ನು ಪರಿಶೀಲಿಸುವಂತೆ ತಹಶೀಲ್ದಾರ್ ಗೆ ಮನವಿ ಮಾಡಿದರು.
ವಸ್ತುಸ್ಥಿತಿ ಹೀಗಿದ್ದರೂ ಡಾ.ಶ್ರೀನಿವಾಸ್ ಅವರು ಪತ್ರಕರ್ತ ಆನಂದ್ ವಿರುದ್ಧ ಅದೇ ದಿನ ಸಂಜೆ ಪೆÇಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಈ ಹಿಂದೆ ಡಾ.ಶ್ರೀನಿವಾಸ್ ಅವರು ಆಸ್ಪತ್ರೆಗೆ ಅಗತ್ಯವಾಗಿ ಬೇಕಿದ್ದ ಅಗತ್ಯ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಂಶಯ ಬಂದಿದ್ದರಿಂದ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೋರಿ ಆನಂದ್ ಅರ್ಜಿಸಲ್ಲಿಸಿದ್ದು, ರೆಮೆಡಿಸಿವಿರ್ ದುರುಪಯೋಗವಾಗಿರುವ ಬಗ್ಗೆ ಸಹ ತಮ್ಮ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು ಇದನ್ನು ಮನಸ್ಸಿನಲ್ಲಿಟ್ಟು ಕೊಂಡು ಅವರ ವಿರುದ್ದ ಈ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ದೇವೇಗೌಡ, ಸತೀಶ್ ಆರಾಧ್ಯ, ತಮ್ಮಣ್ಣೇಗೌಡ, ಪಿ.ಎಸ್.ವೀರೇಶ್, ಪ್ರಸನ್ನಕುಮಾರ್, ಇಮ್ತಿಯಾಜ್, ಪ್ರಸನ್ನ, ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಬಿ.ಆರ್,ಗಣೇಶ್, ಪತ್ರಕರ್ತಕರಾದ ನವೀನ್, ಪವನ್ ಕುಮಾರ್ , ಮಹೇಶ್, ಪುನೀತ್, ಅಶ್ವಥ್, ಲೋಕೇಶ್, ವೆಂಕಟೇಶ್ ಸೇರಿದಂತೆ ಹಲವು ಪತ್ರಕರ್ತರು ಹಾಜರಿದ್ದರು