ಪತ್ನಿ ಹತ್ಯೆಗೈದ ಪತಿ ಬಂಧನ

ಕಲಬುರಗಿ,ಡಿ.23-ಜಿಲ್ಲೆಯ ಕಾಳಗಿ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದ ಪತಿಯನ್ನು ರಟಕಲ್ ಪೊಲೀಸರು ಬಂಧಿಸಿದ್ದಾರೆ.
ಮಾರುತಿ ಈಳಿಗೇರ ಎಂಬಾತನನ್ನೇ ಬಂಧಿಸಲಾಗಿದೆ. ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಮಾರುತಿ ಆ ಕಾರಣಕ್ಕಾಗಿಯೇ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಡಿ.21 ರಾತ್ರಿಯೂ ಕುಡಿದು ಬಂದು ಜಗಳ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಬೆಳಿಗ್ಗೆ ಆಗುವುದರೊಳಗೆ ಪತ್ನಿ ಕಾಶಮ್ಮಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಮಾರುತಿ ಈಳಿಗೇರ್ ಹಾಗೂ ಕೊಲೆಯಾಗಿರುವ ಕಾಶಮ್ಮಗೆ ಮೂರು ಜನ ಮಕ್ಕಳಿದ್ದು, ಮಗಳು ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿದ್ದರೇ, ಇತ್ತ ಇಬ್ಬರು ಪುತ್ರರು ಇವನ ಉಪಟಳ ತಾಳದೇ ಮನೆ ಬಿಟ್ಟು ಬೇರೆ ಕಡೆ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.