ಪತ್ನಿ ಸಾವು ಖಿನ್ನತೆಗೆ ಒಳಗಾಗಿ ಪತಿ ಆತ್ಮಹತ್ಯೆ


ಪಾಟ್ನಾ,ಜ.೯-ಮೃತಪಟ್ಟ ಪತ್ನಿಯ ಫೋಟೊದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪತಿರಾಯನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಜಿಪುರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದವರನ್ನು ಅಮರೇಶ್ ಎಂದು ಗುರುತಿಸಲಾಗಿದೆ. ಈತ ಲೈವ್ ವಿಡಿಯೋ ಮೂಲಕ ಮಾತನಾಡುತ್ತ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಅಮರೇಶ್ ತನ್ನ ಹೆಂಡತಿಯ ಫೋಟೊದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅಮರೇಶನ ಪತ್ನಿ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ಅಮರೇಶ ತನ್ನ ಪತ್ನಿ ಸಾವನ್ನಪ್ಪಿದ ದಿನದಿಂದಲೂ ಖಿನ್ನತೆಗೊಳಗಾಗಿದ್ದನು. ಪತ್ನಿಯ ಯೋಚನೆಯಲ್ಲಿಯೇ ಸದಾ ಮುಳುಗಿರುತ್ತಿದ್ದನು ಎನ್ನಲಾಗಿದೆ. ಈ ಹಿಂದೆ ಅಮರೇಶ್ ತನ್ನ ಅತ್ತಿಗೆಯೊಂದಿಗೆ ಸಂಬಂಧ ಹೊಂದಿದ್ದನು. ಕೆಲವು ವಿಚಾರವಾಗಿ ಅತ್ತಿಗೆಯೊಂದಿಗೆ ಜಗಳ ಮಾಡಿಕೊಂಡಿದ್ದನು. ಆತ್ಮಹತ್ಯೆಗೂ ಮುನ್ನ ಮೃತ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.