ಪತ್ನಿ ಶೀಲ ಶಂಕಿಸಿ ಕೊಂದ ಪತಿ ತಾನೂ ಆತ್ಮಹತ್ಯೆಗೆ ಶರಣು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.28: ಶೀಲ ಶಂಕಿಸಿ ತನ್ನ ಪತ್ನಿಯನ್ನ ಕೊಲೆ ಮಾಡಿದ ಪತಿ   ನಂತರ ತಾನು ನೇಣಿಗೆ ಶರಣಾಗಿರುವ ಘಟನೆ ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಮಾರಸ್ವಾಮಿ ಎಂಬಾತ ತನ್ನ ಹೆಂಡತಿ ರೇಖಾಳನ್ನು  ಜಮೀನಿಗೆ ಕರೆದೊಯ್ದು.
ಕುಡುಗೋಲಿನಿಂದ ಪತ್ನಿಯ ಹೊಟ್ಟೆ ಸೀಳಿ ಕೊಲೆ ಮಾಡಿದ್ದಾನೆ ನಂತರ ತಾನು  ಪಕ್ಕದ ಹೊಲದಲ್ಲಿ ಮರಕ್ಕೆ ನೇಣು ಬಿಗಿದು ಕೊಂಡು ಪ್ರಾಣ ಬಿಟ್ಟಿದ್ದಾನೆ.
ಕಳೆದ 12ವರ್ಷದ ಹಿಂದೆ ರೇಖಾಳನ್ನು ಮದುವೆಯಾಗಿದ್ದ ಕುಮಾರಸ್ವಾಮಿಗೆ 5 ಜನ ಮಕ್ಕಳಿದ್ದರು. ಆದರೆ  ಪತ್ನಿ ಶೀಲದ ಬಗ್ಗೆ ಅನುಮಾನ ಹೊಂದಿದ್ದ. ನಿನ್ನೆ ದಿನ ಜಮೀನಿಗೆ ಕರಡದೊಯ್ದು ಆಕೆಯನ್ನು ಕೊಂದು, ಆ ಬಗ್ಗೆ ಮನೆಯವರಿಗೆ ವಿಷಯ ತಿಳಿಸಿ ತಾನು ನೇಣು ಹಾಕಿಕೊಂಡಿದ್ದಾನಂತೆ.ಈ ಬಗ್ಗೆ
ಸಂಡೂರು ತಾಲೂಕಿನ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.