ಪತ್ನಿ ಎದುರೇ ನೀರಿಗೆ ಹಾರಿ ಪ್ರಾಣ ಬಿಟ್ಟ ಪತಿ

ಹುಬ್ಬಳ್ಳಿ,ಡಿ 25: ಪತ್ನಿ ಎದುರೇ ಪತಿ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾಯಕ ಘಟನೆ ನಗರದ ಸಂತೋಷ ನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ರೋಹಿತ್ ಪಾಟೀಲ್ ಎಂಬ ವ್ಯಕ್ತಿಯೇ ನೀರಿಗೆ ಹಾರಿ ಪ್ರಾಣ ಕಳೆದುಕೊಂಡವ. ಈತ ಟಿಫಿನ್ ಸೆಂಟರ್ ನಡೆಸುತ್ತಿದ್ದ.
ರೋಹಿತ್ ರಾತ್ರಿ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದ್ದು, ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೊರ ನಡೆದು ಪತ್ನಿ ಎದುರೆ ಕೆರೆಗೆ ಹಾರಿದ್ದಾನೆ.
ಅಷ್ಟರಲ್ಲೇ ವಿಷಯ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಒಂದೂವರೆ ಗಂಟೆ ಕಾಲ ಹುಡುಕಾಟ ನಡೆಸಿದ ನಂತರ ರೋಹಿತ ನೀರಿನಲ್ಲಿ ಪತ್ತೆಯಾಗಿದ್ದು, ಆತನನ್ನು ಹೊರತೆಗೆಯುವಷ್ಟರಲ್ಲಿಯೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.