ಪತ್ನಿಯ ಶೀಲ ಶಂಕಿಸಿ ಹಲ್ಲೆ:ಪತಿಗೆ 1 ವರ್ಷ ಜೈಲು

ಕಲಬುರಗಿ,ಏ 17: ಪತ್ನಿಯ ಶೀಲ ಶಂಕಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ್ದರಿಂದ ಪತಿಗೆ ಚಿಂಚೋಳಿಯ ಜೆಎಂಎಫ್‍ಸಿ ನ್ಯಾಯಾಲಯ 1 ವರ್ಷ ಸಾದಾ ಜೈಲು ಶಿಕ್ಷೆ 10 ಸಾವಿರ ರೂ.ದಂಡ ಮತ್ತು ಪತ್ನಿಗೆ 40 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದೆ.
ಚಿಂಚೋಳಿ ತಾಲೂಕಿನ ಕೊಟಗಾ ಗ್ರಾಮದ ಸಂಗ್ರಾಮಪ್ಪಾ ತಿಪ್ಪಣ್ಣ ಉಚ್ಚೇದ್ ಶಿಕ್ಷೆಗೊಳಗಾದ ವ್ಯಕ್ತಿ. 2019ರ ಮೇ 19 ರಂದು ಆರೋಪಿಯ ಪತ್ನಿ ಮತದಾನ ಮಾಡಿ ಮತಗಟ್ಟೆಯಿಂದ ಹೊರ ಬಂದಾಗ ಘಟನೆ ನಡೆದಿತ್ತು.ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.ಚಿಂಚೋಳಿಯ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ದತ್ತಕುಮಾರ ಅವರು ವಾದ ವಿವಾದ ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.