ಪತ್ನಿಯ ಮನೆಗೆಲಸವೂ ಮುಖ್ಯ – ಸುಪ್ರೀಂ

ನವದೆಹಲಿ.ಜ೭:ಪತ್ನಿಯ ಮನೆಗೆಲಸವೂ ಪತಿಯ ಕೆಲಸದಷ್ಟೇ ಮುಖ್ಯ ಎನ್ನುವ ಅಭಿಮತವನ್ನು ವ್ಯಕ್ತಪಡಿಸಿದೆ.
ನ್ಯಾ.ಎನ್.ವಿ.ರಮಣ ಮತ್ತು ಸೂರ್ಯಕಾಂತ ಅವರ ನ್ಯಾಯಪೀಠ, “ಪತಿಯ ಕಚೇರಿಯ ಕೆಲಸ ಎಷ್ಟು ಮುಖ್ಯವೋ, ಪತ್ನಿಯ ಮನೆಗೆಲಸವೂ ಅಷ್ಟೇ ಪ್ರಾಮಖ್ಯತೆಯನ್ನು ಹೊಂದಿದೆ. ಇದನ್ನು ಕಡೆಗಣಿಸುವಂತಿಲ್ಲ”ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇಪ್ಪತ್ತು ವರ್ಷದ ಹಿಂದಿನ ಲತಾ ವಾಧ್ವಾ ಪ್ರಕರಣವನ್ನು ಉಲ್ಲೇಖಿಸಿ ನಾ.ರಮಣ ಅವರು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡಿದ್ದಾರೆ. ಜನಗಣತಿಯ ವೇಳೆ ೧೫.೯೯ ಮಹಿಳೆಯರು ತಮ್ಮ ಕೆಲಸವನ್ನು ’ಮನೆಗೆಲಸ’ ಎಂದು ನಮೂದಿಸಿಕೊಂಡಿರುತ್ತಾರೆ. ಈ ರೀತಿ ನಮೂದಿಸಿಕೊಂಡಿರುವ ಪುರುಷರ ಸಂಖ್ಯೆ ೫೭.೯ ಲಕ್ಷ ಮಾತ್ರ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
೨೦೧೪ರಲ್ಲಿ ನವದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಅಪಘಾತ ಸಂಭವಿಸಿ ದಂಪತಿಗಳು ಮೃತ ಪಟ್ಟಿದ್ದರು. ಈ ದಂಪತಿಗಳನ್ನು ಅವಲಂಬಿಸಿಕೊಂಡಿದ್ದ ತಂದೆಗೆ ೧೧.೨೦ಲಕ್ಷ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿ ನಿರ್ಧರಿಸಿತ್ತು. ಪತಿಯ ಕೆಲದಷ್ಟೇ ಪತ್ನಿಯ ಮನೆ ಕೆಲಸವೂ ಮುಖ್ಯ ಎಂದು ಪರಿಹಾರದ ಮೊತ್ತವನ್ನು ಮೇ, ೨೦೧೪ಕ್ಕೆ ಪೂರ್ವಾನ್ವಯವಾಗುವಂತೆ ಬಡ್ಡಿ ಸಮೇತ ೩೩.೨೦ ಲಕ್ಷ ರೂಪಾಯಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ.
ಪ್ರತೀದಿನ ಮಹಿಳೆ ೧೩೪ ಮತ್ತು ಪುರುಷರು ೭೬ ನಿಮಿಷವನ್ನು ಮನೆಗೆಲಸ ಮಾಡಲು ಸಮಯ ನಿಯೋಗಿಸುತ್ತಾರೆ. ಹಾಗಾಗಿ, ಮಹಿಳೆಯ ಮನೆಗೆಲಸವೂ ಕಚೇರಿಗೆ ಹೋಗುವ ಪತಿಯ ಕೆಲಸದಷ್ಟೇ ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.