ಪತ್ನಿಯ ಕೊಂದ ಮೌಲ್ವಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಏ 21: ವರದಕ್ಷಿಣೆ ತರುವಂತೆ ಪತ್ನಿಗೆ ಮಾನಸಿಕ ದೈಹಿಕ ಹಿಂಸೆ ನೀಡಿ,ಶೀಲ ಶಂಕಿಸಿ ಅವಳನ್ನು ಕೊಲೆ ಮಾಡಿದ ಮೌಲ್ವಿಗೆ ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ.
ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಅಣಬಿ ಗ್ರಾಮದ ಮಸೀದಿಯಲ್ಲಿ ಮೌಲ್ವಿಯಾಗಿದ್ದ ಜೇವರಗಿ ತಾಲೂಕಿನ ಬಿರಾಳ (ಕೆ) ಗ್ರಾಮದ ಈ ವ್ಯಕ್ತಿ ತನ್ನ ಪತ್ನಿ ಶಾಹಿನಾಬೇಗಂ ಎಂಬುವವರನ್ನು 2016 ರ ಏಪ್ರಿಲ್ 15 ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದ.ಈ ಕುರಿತು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ ನಂಜುಡಯ್ಯ ಅವರು ಸಾಕ್ಷಾಧಾರಗಳನ್ನು ಪರಿಶೀಲಿಸಿ, ಕೊಲೆ ಆರೋಪ ಸಾಬೀತಾದ್ದರಿಂದ ಮೌಲ್ವಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಅಭಿಯೋಜನೆಯ ಪರವಾಗಿ ಸಾರ್ವಜನಿಕ ಅಭಿಯೋಜಕ ವಿಶ್ವನಾಥ ಉಭಾಳೆ ಅವರು ವಾದ ಮಂಡಿಸಿದ್ದರು.