ಪತ್ನಿಯ ಅಪ್ರಾಪ್ತ ತಂಗಿ ಬಲತ್ಕರಿಸಿದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ

ವಿಜಯಪುರ: ಜು.15:ಪತ್ನಿಯ ಅಪ್ರಾಪ್ತ ವಯಸ್ಸಿನ ತಂಗಿಯ ಮೇಲೆ ಲೈಂಗಿಕದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26ಸಾವಿರ ರೂ. ದಂಡ ವಿಧಿಸಿ ವಿಜಯಪುರ ಜಿಲ್ಲಾ ವಿಶೇಷ ಪೆÇೀಕ್ಲೋನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ತಾಳಿಕೋಟೆ ತಾಲೂಕಿನಬೊಮ್ಮನಹಳ್ಳಿ ಗ್ರಾಮದ ಶಿವರಾಜ್ ಬಸವಂತಪ್ಪ ಬಡಿಗೇರ (29)ಜೀವಾವಧಿ ಶಿಕ್ಷೆಗೊಳಗಾದವ. ಈತ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ
ಕೆಲಸ ಮಾಡುತ್ತಿದ್ದ. ಆದರೆ ಕೊರೊನಾದಲ್ಲಿ ಪತ್ನಿಯ ಊರಿಗೆ ಬಂದಿದ್ದಆದರೆ ಪತ್ನಿ ಮಾರುಕಟ್ಟೆಗೆ ತೆರಳಿದ್ದ ವೇಳೆ ಪತ್ನಿಯ ತಂಗಿಯ ಮೇಲೆ2020ರ ಏಪ್ರಿಲ್ 18 ರಂದು ದೌರ್ಜನ್ಯ ಎಸಗಿದ್ದ. ಬಳಿಕ ಈ ವಿಷಯಬಹಿರಂಗಗೊಳಿಸಿದರೆ, ನೀನು, ನಿನ್ನ ಅಕ್ಕ ಹಾಗೂ ನಿಮ್ಮ ತಂದೆ-ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಮತ್ತೆ ಮೇ 5
ರಂದು ಬಾಲಕಿ ಮನೆಯಲ್ಲಿ ಒಬ್ಬಳೆ ಓದುತ್ತಿದ್ದಾಗಲೂ, ಆಕೆಯ ಮೇಲೆದೌರ್ಜನ್ಯ ಎಸಗಿದ್ದನೆಂದು ತಾಳಿಕೋಟೆ ಠಾಣೆ ಪೆÇಲೀಸರುನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ
ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಪೆÇೀಕ್ಸ್ ನ್ಯಾಯಾಲಯದ
ನ್ಯಾಯಾಧೀಶ ರಾಮ ನಾಯಕ ಅವರು ಸಾಕ್ಷಿಗಳನ್ನು ಪರಿಶೀಲಿಸಿ,ಆರೋಪಯ ಕೃತ್ಯ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆವಿಧಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.