ಪತ್ನಿಯ ಅನಾರೋಗ್ಯದ ಕಾರಣ ಅನುಪಮ್ ಖೇರ್ ಟಿವಿ ಶೋ ತ್ಯಜಿಸಿದರು

ಹಿರಿಯ ನಟ ಅನುಪಮ್ ಖೇರ್ ಅಮೆರಿಕೀ ಮೆಡಿಕಲ್ ಡ್ರಾಮಾ ’ನ್ಯೂ ಎಮ್ಸ್ ಸ್ಟರ್ಡಮ್’ ನಿಂದ ಹೊರಗೆ ಬಂದಿದ್ದಾರೆ. ಎನ್ ಬಿ ಸಿ ನೆಟ್ವರ್ಕ್ ನ ಈ ಶೋದಲ್ಲಿ ಅವರು ಡಾಕ್ಟರ್ ವಿಜಯ್ ಕಪೂರ್ ರ ಪಾತ್ರವನ್ನು ನಿರ್ವಹಿಸುತ್ತಿದ್ದರು.ಶೋದ ಎರಡು ಸೀಜನ್ ಬಂದಿರುತ್ತದೆ.
ಮೂರನೇ ಸೀಜನ್ ನಡೆಯುತ್ತಿದೆ.ಇದರಲ್ಲಿ ಆಸ್ಪತ್ರೆಯ ಸ್ಟಾಫ್ ಗೆ ಕೊರೊನಾ ಸಂಕಟವನ್ನು ಕಾಣಿಸಲಾಗಿದೆ.


ಶೋದ ತಾಜಾ ಎಪಿಸೋಡ್ ನಲ್ಲಿ ಡಾ.ವಿಜಯ್ ಅವರು ಆಸ್ಪತ್ರೆಗೆ ರಾಜೀನಾಮೆ ನೀಡುವುದನ್ನು ತೋರಿಸಲಾಗಿದೆ. ಇದಕ್ಕೆ ಕಾರಣ ಅವರ ಪತ್ನಿ ಕಿರಣಾ ಖೇರ್ ರಿಗೆ ಕ್ಯಾನ್ಸರ್ ಡಿಟೆಕ್ಟ್ ಪ್ರಯುಕ್ತ ಅನುಪಮ್ ರು ಶೋವನ್ನು ತ್ಯಜಿಸಲು ತೀರ್ಮಾನಿಸಿದ್ದಾರಂತೆ. ಕೆಲವು ದಿನ ಮೊದಲೇ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ನೀಡಿದ್ದರು.ಕಿರಣಾ ಅವರು ಮಲ್ಟಿಪಲ್ ಮೈಲೋಮಾ ಹೆಸರಿನ ರೋಗದಿಂದ ಬಳಲುತ್ತಿದ್ದಾರೆ. ಇದು ಬ್ಲಡ್ ಕ್ಯಾನ್ಸರ್‌ನ ಒಂದು ಪ್ರಕಾರವಾಗಿದೆ.

ರಣವೀರ್ ಸಿಂಗ್ ರಿಂದ ತಮಿಳು ರಿಮೇಕ್ ಹೊಸ ಫಿಲ್ಮ್ ನ ಘೋಷಣೆ

ರಣವೀರ್ ಸಿಂಗ್ ತನ್ನ ಅಪ್ ಕಮಿಂಗ್ ಫಿಲ್ಮ್ ನ ಘೋಷಣೆಯನ್ನು ಮಾಡಿದ್ದಾರೆ. ಈ ಫಿಲ್ಮ್ ೨೦೦೫ ರಲ್ಲಿ ಬಂದ ತಮಿಳಿನ ಸೂಪರ್ ಹಿಟ್ ’ಅನ್ನಿಯನ’ ಇದರ ಅಧಿಕೃತ ರಿಮೇಕ್ ಫಿಲ್ಮ್ ಆಗಿರುವುದು.ಫಿಲ್ಮ್ ಗಾಗಿ ರಣವೀರ್ ರೊಬೋಟ್ ಇಂಥ ಫಿಲ್ಮ್ ಗಳ ನಿರ್ದೇಶಕ ಶಂಕರ್ ಜೊತೆ ಕೈಜೋಡಿಸಿದ್ದಾರೆ.


ರಣವೀರ್ ಫಿಲ್ಮ್ ನ ಘೋಷಣೆ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ- “ಭಾರತೀಯ ಸಿನಿಮಾದ ಅಗ್ರಣಿ ದೂರದರ್ಶಿ ಮಾಸ್ಟರ್ ಕ್ರಾಫ್ಟ್ಸ್ ಮ್ಯಾನ್ ಶಂಕರ್ ಮತ್ತು ದಿಗ್ಗಜ ಪ್ರೊಡ್ಯೂಸರ್ ಡಾ. ಜಯಂತಿಲಾಲ್ ಗಡಾ ಅವರ ಜೊತೆಗೂಡಿ ಜಂಟಿಯಾಗಿ ಇದನ್ನು ಘೋಷಣೆ ಮಾಡುತ್ತಿದ್ದೇನೆ” ಎಂದು.

ರಣವೀರ್ ’೮೩’, ’ಜಯೇಶ್ ಭಾಯಿ ಜೋರ್ದಾರ್’, ಮತ್ತು ಸರ್ಕಸ್ ನಲ್ಲಿ ಅಭಿನಯಿಸುತ್ತಿದ್ದಾರೆ.

’ಶಾಂತಿ’ ಪಾತ್ರದಿಂದ ಪರಿಚಿತರಾದ ಮಂದಿರಾ ಬೇಡಿ ಗೆ ೪೮

ಬಾಲಿವುಡ್ ನಟಿ ,ಮಾಡೆಲ್, ಫ್ಯಾಷನ್ ಡಿಸೈನರ್ ಮತ್ತು ಟಿವಿ ಪ್ರೆಸೆಂಟರ್ ಮಂದಿರಾ ಬೇಡಿ ಅವರಿಗೆ ೪೮ ವರ್ಷ ಪ್ರಾಯವಾಯಿತು. ಅವರ ಜನ್ಮ ೧೫ ಏಪ್ರಿಲ್ ೧೯೭೨ ರಂದು ಕಲ್ಕತ್ತದಲ್ಲಿ ಆಗಿತ್ತು.ತಂದೆ ವೀರೇಂದ್ರ ಸಿಂಗ್ ಬೇಡಿ, ತಾಯಿ ಗೀತಾ ಬೇಡಿ.
೯೦ರ ದಶಕದ ಟಿವಿ ಶೋ ’ಶಾಂತಿ’ಯ ಪ್ರಧಾನ ಪಾತ್ರದ ಮೂಲಕ ಅವರು ಪ್ರಸಿದ್ಧರಾಗಿದ್ದರು.
ಇದು ಕೌಟುಂಬಿಕ ಟಿವಿ ಶೋ ಆಗಿತ್ತು .ಮಂದಿರಾ ಬೇಡಿ ಮನೆಮನೆಯಲ್ಲಿ ಶಾಂತಿಯ ಹೆಸರಲ್ಲೇ ಪ್ರಖ್ಯಾತರು. ಅನಂತರ ಅವರು ’ಔರತ್’ ಮತ್ತು ’ಕ್ಯೋಂಕಿ ಸಾಸ್ ಭಿ ಕಭೀ ಬಹೂ ಥೀ’ ಇಂತಹ ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದರು.


’ಶಾಂತಿ’ಯಲ್ಲಿ ಗ್ಲಾಮರ್ ಮತ್ತು ಶೃಂಗಾರದಿಂದ ದೂರ ಇದ್ದ ಮಂದಿರಾ ಬೇಡಿ ಇಂದು ತನ್ನ ಸ್ಟೈಲ್ ಮತ್ತು ಗ್ಲಾಮರಸ್ ಲುಕ್ ನಿಂದ ಗಮನಸೆಳೆದಿದ್ದಾರೆ. ಐಪಿಎಲ್ ಸೀಸನ್ ೩ ರ ಆಂಕರ್ ಆಗಿಯೂ ಅವರು ಪ್ರಸಿದ್ಧರು. ಆವಾಗ ಅವರು ಧರಿಸಿದ್ದ ಸೀರೆ ಬಹಳ ಖ್ಯಾತಿ ಪಡೆದಿತ್ತು. ೨೦೧೪ರಲ್ಲಿ ಅವರು ತನ್ನದೇ ಆದ ಸ್ವಂತ ಸೀರೆಯ ಮಳಿಗೆಯನ್ನು ಅವರು ಲಾಂಚ್ ಮಾಡಿದ್ದರು.


ಅವರು ವಾಲೆಂಟೈನ್ ಡೇ ದಿನ ವಿವಾಹವಾಗಿದ್ದರು. ೧೪ ಫೆಬ್ರವರಿ ೧೯೯೯ ರಲ್ಲಿ ಫಿಲ್ಮ್ ಮೇಕರ್ ರಾಜ್ ಕೌಶಲ್ ಜೊತೆ ವಿವಾಹವಾಗಿದ್ದರು.ಇವರಿಗೆ ಒಬ್ಬ ಮಗ ಇದ್ದಾನೆ .ಆತ ೧೯ ಜೂನ್ ೨೦೧೧ರಂದು ಜನಿಸಿದ್ದ .ವಿವಾಹದ ಹನ್ನೊಂದು ವರ್ಷಗಳ ನಂತರ ಅವರು ತಾಯಿ ಎನಿಸಿಕೊಂಡರು. ಇದಕ್ಕೆ ತನ್ನ ಕೆರಿಯರ್ ಕಾರಣ ಎಂದಿದ್ದರು. ಕಳೆದ ವರ್ಷ ೨೦೨೦ ರಲ್ಲಿ ಒಬ್ಬ ಮಗಳನ್ನು ದತ್ತು ಪಡೆದಿದ್ದಾರೆ.
ತನ್ನ ಫಿಟ್ನೆಸ್ ಒಳಗುಟ್ಟು ಏನೆಂದರೆ ಪ್ರತೀ ದಿನ ಹತ್ತು ಕಿಲೋಮೀಟರ್ ವರೆಗೆ ಓಡುತ್ತೇನೆ ಎನ್ನುವುದು .ತಾನು ಎಲ್ಲೇ ಹೋಗುವುದಿದ್ದರೂ ಸ್ಪೋರ್ಟ್ಸ್ ಶೂ ಧರಿಸುತ್ತೇನೆ ಎನ್ನುತ್ತಾರೆ ಮಂದಿರಾ.