ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು 25 ವರ್ಷದ ವ್ಯಕ್ತಿ ಆತ್ಮಹತ್ಯೆ

ವಿಜಯಪುರ, ಸೆ.26:ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜೊತೆಗೆ ಎಸ್ಕೇಪ್ ಆಗಿದ್ದಕ್ಕೆ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇನ್ನೂ ಪತಿರಾಯ ಫೇಸ್ಬುಕ್‍ನಲ್ಲಿ ವಿಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡ ಆಸಾಮಿಯಾಗಿದ್ದು ಈತ ಫೇಸ್ಬುಕ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ಹೇಳಿ ಸಾವಿಗೆ ಶರಣಾಗಿಯ. ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವೆಂಕಟೇಶನ ಪಕ್ಕದ ಮನೆಯ ಸಹೋದರ ಸಂಬಂಧಿ ಶ್ರೀಶೈಲ್ ಎಂಬುವನ ಜೊತೆಗೆ ಪತ್ನಿ ಎಸ್ಕೇಪ್ ಆಗಿದ್ದಳು ಈ ಕುರಿತು ತಾಳಿಕೋಟೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದ ಆದ್ರೆ ಪತ್ನಿ ವೆಂಕಟೇಶ ಜೊತೆಗೆ ಇರೊಲ್ಲ, ಪ್ರೀಯಕರ ಶ್ರೀಶೈಲ್ ಜೊತೆಗೆ ಇರುವುದಾಗಿ ಹೇಳಿದ್ದಳು. ಆಕೆಯ ಹಕ್ಕುಗಳ ಬಗ್ಗೆ ಗಂಡ ವೆಂಕಟೇಶಗೆ ಪೆÇಲೀಸರು ಮನವರಿಕೆ ಮಾಡಿದ್ದರು

ಬಳಿಕ ವೆಂಕಟೇಶ ಮನನೊಂದು ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗು ಮುನ್ನ “ತನ್ನ ಸಾವಿಗೆ ಶ್ರೀಶೈಲ್ ಹೊಣೆ” ಎಂದು ಹೇಳಿ ಫೇಸ್ಬುಕ್ ಲೈವ್ ಮಾಡಿ ನೇಣಿಗೆ ಶರಣಾಗಿದ್ದಾನೆ. ಫೇಸ್ಬುಕ್ ನಲ್ಲಿ ವಿಡಿಯೋ ಕಂಡು ಜಮೀನಿನಲ್ಲಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ವೆಂಕಟೇಶ ಪ್ರಾಣ ಉಳಿಸಲು ಸ್ಥಳೀಯರ ಯತ್ನಿಸಿದ್ದರು ಆದ್ರೆ ತಾಳಿಕೋಟೆ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ದಾರಿ ಮಧ್ಯೆಯೇ ವೆಂಕಟೇಶ ಸಾವನ್ನಪ್ಪಿದ ಈ ಕುರಿತು ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.