ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಪತಿ

ಹಾಸನ, ಜು.20- ತನ್ನನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯನ್ನು ಪತಿಯೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೇಲೂರು ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ನಡೆದಿದೆ.
ಪಂಪ್‌ಹೌಸ್ ರಸ್ತೆಯ‌‌ ಅಶ್ವಿನಿ (36) ಕೊಲೆಯಾದ ಮಹಿಳೆಯಾಗಿದ್ದು ಪತಿ ಜಗದೀಶ್​ ಕೃತ್ಯ ನಡೆಸಿದ್ದಾನೆ.
ಕೊಲೆಯಾದ ಅಶ್ವಿನಿ ಹಾಗೂ ಜಗದೀಶ್ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚಿಗೆ ಜಗದೀಶ್ ಪತ್ನಿ ಜೊತೆ ಪದೇ ‌ಪದೇ ಜಗಳವಾಡುತ್ತಿದ್ದು, ಇದರಿಂದ ಮನನೊಂದ ಅಶ್ವಿನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಇಂದು ಪತ್ನಿ ಇರುವ ಮನೆಗೆ ಬಂದಿದ್ದ ಜಗದೀಶ್​ ಮಾರಕಾಸ್ತ್ರಗಳಿಂದ ಭೀಕರ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಕ್ಕಳು ಶಾಲೆಯಿಂದ‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.