ಪತ್ನಿಗೆ ಬೆಂಕಿಯಿಟ್ಟು ಸುಟ್ಟ ಭೂಪ ಪರಾರಿ

ಮೈಸೂರು, ನ.14: ಬೆಳಕಿನ ಹಬ್ಬ ದೀಪಾವಳಿಯಂದೇ ವ್ಯಕ್ತಿಯೋರ್ವ ತನ್ನ ಹೆಂಡತಿಗೆ ಬೆಂಕಿಯಿಟ್ಟ ಘಟನೆ ತಿ.ನರಸೀಪುರ ತಾಲೂಕಿನಲ್ಲಿ
ನಡೆದಿದೆ.
ದೊಡ್ಡಮುಲಗೂಡು ಗ್ರಾಮದ ಗ್ರಾಪಂ ಸದಸ್ಯ ರಮೇಶ್(30)ಎಂಬಾತ ತನ್ನ ಪತ್ನಿ ಶಾಂತಮ್ಮ (22) ಎಂಬಾಕೆಯನ್ನು ಕೊಲೆ ಮಾಡಿ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಸಂಬಂಧ ಬನ್ನೂರು ಪೆÇಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಬಳಿಕ ರಮೇಶ್ ತಲೆಮರೆಸಿಕೊಂಡಿದ್ದಾನೆ, ಕೊಲೆ ಆರೋಪಿ ರಮೇಶ್ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.