ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಪತಿ ನೇಣಿಗೆ ಶರಣು

ಕಲಬುರಗಿ,ಸೆ.18:ಕಳೆದ ಗುರುವಾರ ಚಿತ್ತಾಪುರ ತಾಲ್ಲೂಕಿನ ಅಲ್ಲೂರ್ (ಕೆ) ಗ್ರಾಮದಲ್ಲಿ ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತಿ ಶನಿವಾರ ನೇಣಿಗೆ ಶರಣಾಗಿದ್ದಾನೆ.
ಮೃತ ದುರ್ದೈವಿಯನ್ನು ಬಸವರಾಜ್ ಹಂಪಯ್ಯ (40) ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಹಣಮವ್ವ (35)ಳನ್ನು ಕಳೆದ ಗುರುವಾರ ತವರು ಮನೆಯ ಅಲ್ಲೂರ್(ಕೆ) ಗ್ರಾಮದಲ್ಲಿ ಬಂದೂಕಿನಿಂದ ಗುಂಡು ಹಾರಿ ಕೊಲೆ ಮಾಡಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಯ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.
ಕಳೆದ ಶನಿವಾರ ರಾತ್ರಿ ಬಸವರಾಜ್‍ನ ಮನೆಯಿಂದ ದುರ್ವಾಸನೆ ಹರಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಆ ಕುರಿತು ಪೋಲಿಸರಿಗೆ ಮಾಹಿತಿ ನೀಡಿದರು. ಮನೆಗೆ ಪೋಲಿಸರು ಭೇಟಿ ನೀಡಿದಾಗ ಬಸವರಾಜ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಪ್ರಕಾಶ್ ಯಾತನೂರ್, ಪಿಎಸ್‍ಐ ಶ್ರೀಶೈಲ್ ಅಂಬಾಟಿ, ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.