ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು

ಬೆಂಗಳೂರು, ಜೂ.8- ಬೆಟ್ಟದಷ್ಟು ಆಸೆ, ಕನಸುಗಳನ್ನು ಕಟ್ಟಿಕೊಂಡು ವಿವಾಹವಾಗಿದ್ದ ಪತ್ನಿಯು ಪತಿಯಿಂದ ನನಗೆ ಸಿಗಬೇಕಿದ್ದ ಸುಖ ಸಿಗುತ್ತಿಲ್ಲ ಎಂದು ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.
ನನಗಿನ್ನೂ‌ 21 ವರ್ಷ, ಎಲ್ಲಾ ಯುವತಿಯರಂತೆ ನನಗೂ ತನ್ನ ಪತಿಯ ಜೊತೆ ಸುಮಧುರ ಕ್ಷಣಗಳನ್ನು ಕಳೆಯಬೇಕೆಂಬ ಹಂಬಲ ಆಸೆ ಇದೆ.
ಪತಿಯ ರೂಪದಲ್ಲಿ ಒಬ್ಬ ಜೊತೆಗಾರ ಸಿಕ್ಕ ಎನ್ನುವ ಖುಷಿಯಿಂದ ತನ್ನ ಮನೆಯವರು ನೋಡಿದ ಹುಡುಗನನ್ನು ಮದುವೆಯಾದೆ,
ಸುಖ ಸಂಸಾರದ ಬಗ್ಗೆ ನೂರಾರು ಕನಸು ಕಂಡೆ. ಆದರೆ ಆ ಕನಸುಗಳೆಲ್ಲಾ ಕನಸುಗಳಾಗಿಯೇ ಉಳಿದುಹೋಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಮಂಡ್ಯ ಮೂಲದ ಯುವತಿ, ಹಾಸನ ಮೂಲದ ಯುವಕ, ಇಬ್ಬರಿಗೂ ಕಳೆದ ವರ್ಷ ಮದುವೆಯಾಗಿದೆ. ಹುಡುಗ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ ಮೆಂಟ್ ವೊಂದರ ಸೆಕ್ಯುರಿಟಿ ಸೂಪರವೈಸರ್ ಆಗಿ ಕೆಲಸ ಮಾಡುತ್ತಿದ್ದು, ಎಲ್ಲರ‌ ಜೊತೆಗೆ ಅನೋನ್ಯವಾಗಿದ್ದಾನೆ.
ಆದರೆ ಪತ್ನಿಯ ಜತೆ ಸಲುಗೆ ಬೆಳೆಸುವುದಾಗಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಾಗಲಿ ಮಾಡುತ್ತಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.‌ ಅಲ್ಲದೇ ‌ಪ್ರೀತಿಯಿಂದ ಮಾತನಾಡಿಸಲು ಹತ್ತಿರ ಹೋದರೂ ಚಿಕ್ಕ ಚಿಕ್ಕ ವಿಚಾರಗಳನ್ನು ತೆಗೆದು ಜಗಳ‌ಮಾಡುತ್ತಾನೆ.
ಎಷ್ಟೂ ಅಂತ‌ ನಾನು ಸಹಿಸಲಿ, ಅದಕ್ಕೆ ವಿಚ್ಛೇದನ ಕೋರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಆದರೆ ಅದಕ್ಕೂ ಸಹಿ ಮಾಡುವುದಕ್ಕೆ ಕೊರ್ಟ್ ಗೆ ಬಂದಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅತ್ತ ವಿಚ್ಛೇದನಾ ನೀಡಿದೆ, ಇತ್ತ ಸರಿಯಾಗಿ ಸಂಸಾರವೂ ಮಾಡದೇ ನನ್ನ ಜೀವನ ಹಾಳಾಗುತ್ತಿದೆ ಅದಕ್ಕೆ ನ್ಯಾಯ ಬೇಕು ಎಂದು ಯುವತಿ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದು, ಯುವಕನ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸಿ ಎಂದು ಮನವಿ‌ ಮಾಡಿಕೊಂಡಿದ್ದಾರೆ.