ಪತಿ ಮತ್ತು ಮಲ ಮಗಳ ಜೊತೆ ಮಾಲ್ಡೀವ್ ನಲ್ಲಿ ದಿಯಾ ಮಿರ್ಜಾರ ಹನಿಮೂನ್

ನಟಿ ದಿಯಾ ಮಿರ್ಜಾ ಈ ದಿನಗಳಲ್ಲಿ ಪತಿ ವೈಭವ್ ರೇಖೀ ಜೊತೆಗೆ ಮಾಲ್ಡೀವ್ ನಲ್ಲಿ ಹನಿಮೂನ್ ಪ್ರವಾಸದಲ್ಲಿದ್ದಾರೆ. ಅವರ ಜೊತೆಗೆ ವೈಭವ್ ಮತ್ತು ಅವರ ಮೊದಲ ಪತ್ನಿ ಸುನೈನಾರ ಮಗಳು ಸಮಾಯರಾ ಕೂಡ ಇದ್ದಾರೆ.
ದಿಯಾ ಮಿರ್ಜಾ ಹನಿಮೂನ್ ನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ-


“ನಾವು ಮಾಲ್ಡೀವ್ ನಲ್ಲಿ ಕೆಲವು ಖಾಸಗೀ ನೆನಪುಗಳೊಂದಿಗೆ ಪ್ರವಾಸದಲ್ಲಿ ಇದ್ದೇವೆ” ಎಂದು ಅದರಲ್ಲಿ ಬರೆದಿದ್ದಾರೆ.
ಫೋಟೋದಲ್ಲಿ ದಿಯಾಮಿರ್ಜಾ,ಪತಿ ವೈಭವ್ ಮತ್ತು ಸಮಾಯರಾ ಜೊತೆಗೆ ಪೋಸ್ ನೀಡಿದ್ದನ್ನು ಕಾಣಬಹುದು.
ದಿಯಾ ೨೦೧೪ರಲ್ಲಿ ಮೊದಲ ವಿವಾಹವನ್ನು ಫಿಲ್ಮ್ ಪ್ರೊಡ್ಯೂಸರ್ ಮತ್ತು ದೀರ್ಘ ಬಿಸ್ ನೆಸ್ ಪಾರ್ಟ್ನರ್ ಸಾಹಿಲ್ ಸಂಘಾ ಜೊತೆಗೆ ಮಾಡಿಕೊಂಡಿದ್ದರು. ಆದರೆ ಐದು ವರ್ಷಗಳಲ್ಲಿ ಅವರು ಬೇರೆಯಾದರು. ೧೫ ಫೆಬ್ರವರಿ ೨೦೨೧ರಂದು ಮುಂಬೈಯಲ್ಲಿ ದಿಯಾ ಮಿರ್ಜಾ ವೈಭವ್ ರೇಖೀ ಅವರನ್ನು ಎರಡನೇ ವಿವಾಹವಾದರು.

ಸಂಜೆಫಿಲ್ಮ್ ಫಿಲ್ಮ್ ’ಹಾಥೀ ಮೇರೇ ಸಾಥೀ’ ಯ ಶ್ರಿಯಾ ಪಿಲ್ಗಾಂವ್ಕರ್ ಹೇಳುತ್ತಾರೆ- ಶೂಟಿಂಗ್ ಸಮಯ ಅರಣ್ಯದಲ್ಲಿ ನೆಟ್ ವರ್ಕ್ ಸಿಗುತ್ತಿರಲಿಲ್ಲ

ನಟಿ ಶ್ರಿಯಾ ಪಿಲ್ಗಾಂವ್ಕರ್ ’ಹಾಥಿ ಮೇರೆ ಸಾಥೀ’ ಫಿಲ್ಮ್ ನಲ್ಲಿ ಕಂಡು ಬಂದಿದ್ದಾರೆ. ಆ ಫಿಲ್ಮ್ ನಲ್ಲಿ ಅವರು ಯಂಗ್ ನ್ಯೂಸ್ ರಿಪೋರ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಹಾಥಿ ಮೇರೆ ಸಾಥೀಯಲ್ಲಿ ತನಗೆ ಜರ್ನಲಿಸ್ಟ್ ಪಾತ್ರ ಇರುವುದನ್ನು ಅವರು ಖುಷಿಯಿಂದ ಹೇಳಿದ್ದಾರೆ.


“ಯಾವುದು ಸತ್ಯ ಅದನ್ನಷ್ಟೇ ಬರೆಯುತ್ತೇನೆ. ನನಗೆ ಅರಣ್ಯದಲ್ಲಿ ಹೆಚ್ಚಿನ ಶೂಟಿಂಗ್ ಇರಲಿಲ್ಲ. ಆದರೆ ಉಳಿದ ಕಲಾವಿದರಿಗೆ ಅರಣ್ಯದಲ್ಲಿ ಬಹಳಷ್ಟು ಶೂಟಿಂಗ್ ಇತ್ತು. ಅರಣ್ಯದ ಶೂಟಿಂಗ್ ನ ಅನುಭವ ಬಹಳ ಅಪರೂಪವಾದದ್ದು. ವಿಮಾನ ನಿಲ್ದಾಣದಿಂದ (ಕೇರಳ) ತಲುಪಲು ೬ ಗಂಟೆ ಹಿಡಿಯಿತು.ಅಲ್ಲಿ ಶೂಟಿಂಗ್ ಲೊಕೇಶನ್ ತನಕ ತಲುಪಲು ಜೀಪ್ ನಲ್ಲಿ ಹೋಗಬೇಕಾಯಿತು .ಅಲ್ಲಿಗೆ ತಲುಪಿದ ನಂತರ ತನ್ನಷ್ಟಕ್ಕೇ ಪಾತ್ರದಲ್ಲಿ ತಲ್ಲೀನರಾದೆವು. ಅರಣ್ಯದಲ್ಲಿ ನೆಟ್ವರ್ಕ್ ಸಿಗುತ್ತಿರಲಿಲ್ಲ .ಪ್ರಕೃತಿಯ ಅಕ್ಕಪಕ್ಕದಲ್ಲಿ ನಾವಿದ್ದೇವೆ ಅಂದರೆ ಅದರ ಅನುಭವವೇ ವಿಶಿಷ್ಟವಾದುದು. ನನ್ನ ಯಾವುದೇ ದೃಶ್ಯ ಆನೆಯ ಜೊತೆಗೆ ಇಲ್ಲ. ಆದರೆ ನಾನು ಆನೆಗಳ ಜೊತೆ ಸಮಯ ಕಳೆದದ್ದು ಅವಿಸ್ಮರಣೀಯ ಅನುಭವ. ನನಗೆ ಆನೆ ಅಂದರೆ ಬಹಳ ಇಷ್ಟ. ಇದೊಂದು ಪ್ರಕೃತಿ ನಡುವಿನ ಫಿಲ್ಮ್. ಈ ಫಿಲ್ಮಿನ ಶೂಟಿಂಗ್ ಸಮಯ ನನಗೆ ತಿಳಿದಿತ್ತು- ಈ ಪೂರ ಫಿಲ್ಮ್ ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು. ಆದರೆ ಇದರ ಕತೆ ಬಹಳ ಇಷ್ಟವಾಗಿದೆ. ಸೆಟ್ಟ್ ನಲ್ಲಿ ವ್ಯಾನಿಟಿ ವ್ಯಾನ್ಸ್ ಇತ್ತು .ಆದರೆ ಬಹಳ ದೂರ ಇರುತ್ತಿತ್ತು. ರಫ್ ಅಂಡ್ ಟಫ್ ಕಲಾವಿದರನ್ನೇ ನಿರ್ದೇಶಕರು ಆಯ್ಕೆ ಮಾಡಿದ್ದರು. ಅರಣ್ಯದಲ್ಲಿ ಶೂಟಿಂಗ್ ಸಮಯ ಅದರ ಮಜಾನೆ ಬೇರೆ. ನಾವು ಸದಾಕಾಲ ಎಚ್ಚರಿಕೆಯಿಂದ ಇರಬೇಕಾಗುತ್ತದೆ….”


ಮುಂದುವರೆದು ಶ್ರಿಯಾ ಹೇಳುತ್ತಾರೆ- ನನಗೆ ಹೆಚ್ಚು ಇಷ್ಟ ಅಂದರೆ ನಾಯಿ .ನಾನು ಒಂದು ನಾಯಿಯನ್ನು ದತ್ತು ಕೂಡ ಪಡೆದಿದ್ದೇನೆ. ಅದರ ಹೆಸರು ಜಾಕ್. ಅದಕ್ಕೆ ಒಂದೇ ಕಣ್ಣಿದೆ. ನನಗೆ ಹೆಚ್ಚು ಹೆದರಿಕೆ ಅಂದರೆ ಜಿರಳೆ. ಹಲ್ಲಿ ಸಿಂಹ ಹುಲಿ ಮೊಸಳೆ ಇದರಲ್ಲಿ ಯಾವುದೂ ಜಿರಳೆಯಷ್ಟು ನನಗೆ ಹೆದರಿಕೆಯಿಲ್ಲ ಎಂದು ತಮಾಷೆಯಾಗಿ ಹೇಳುತ್ತಾರೆ.

ಬಾಲಿವುಡ್ ನಿರ್ದೇಶಕರ ಮೆಚ್ಚಿನ ಶೂಟಿಂಗ್ ನಗರ ಭೂಪಾಲ್ ಪರಿಸರ ಕೊರೊನಾ ಹಾಟ್ ಸ್ಪಾಟ್: ಶೂಟಿಂಗ್ ಸ್ಥಗಿತ

ಇತ್ತೀಚಿನ ವರ್ಷಗಳಲ್ಲಿ ಸಬ್ಸಿಡಿ ಮತ್ತು ಸುಂದರ ಲೊಕೇಶನ್ ಗಳ ಕಾರಣದಿಂದ ಭೂಪಾಲ್ ಮತ್ತು ಅದರ ಅಕ್ಕಪಕ್ಕದ ಹಲವು ಊರುಗಳು ಫಿಲ್ಮ್ ಶೂಟಿಂಗ್ ನ ಹಾಟ್ ಸ್ಪಾಟ್ ಎನಿಸಿಕೊಳ್ಳುತ್ತಿವೆ. ಆದರೆ ಈ ದಿನಗಳಲ್ಲಿ ಮತ್ತೆ ಕೊರೊನಾ ಕೇಸುಗಳು ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಅರ್ಧ ಡಜನ್ ಗೂ ಹೆಚ್ಚಿನ ಫಿಲ್ಮ್ ಗಳು ವೆಬ್ ಸೀರೀಸ್ ಮತ್ತು ಸೀರಿಯಲ್ ಗಳ ಶೂಟಿಂಗ್ ತಟಸ್ಥಗೊಂಡಿವೆ.
ಕ್ರೂ ಮೆಂಬರ್ಸ್ ಶೂಟಿಂಗ್ ಪ್ಯಾಕಪ್ ಮಾಡಿ ಮುಂಬೈಗೆ ವಾಪಸ್ ಹೊರಡುತ್ತಿದ್ದಾರೆ. ಈ ಸಂಗತಿಗಳನ್ನು ಫಿಲ್ಮ್ ಮತ್ತು ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ಜನರೇ ಬಹಿರಂಗಪಡಿಸಿದ್ದಾರೆ.


ಪ್ರೊಡಕ್ಷನ್ ಹೌಸ್ ಗೆ ಸಂಬಂಧಿಸಿದ ಜನರು ಹೇಳುವಂತೆ ತಾಜಾ ಉದಾಹರಣೆ ಆರ್ ಮಾಧವನ ಅವರದು. ಇವರ ಹೊರತಾಗಿ ಐಶ್ವರ್ಯ ರೈ ಬಚ್ಚನ್ ಮತ್ತು ಮಣಿರತ್ನಂ ಅವರ ಪೊನ್ನಿಯಿನ ಸೆಲ್ವನ್ ಇದರ ಶೂಟಿಂಗ್ ಸದ್ಯ ನಿಂತುಬಿಟ್ಟಿದೆ .
ಕಳೆದ ವರ್ಷ ಮೊದಲಿಗೆ ಥಾಯ್ಲ್ಯಾಂಡ್, ನಂತರ ಕೆಲವು ದಿನಗಳ ಮೊದಲು ಹೈದರಾಬಾದ್ ಮತ್ತು ಪುದುಚೇರಿ ಯಲ್ಲಿ ಈ ಫಿಲ್ಮ್ ನ ಶೂಟಿಂಗ್ ನಡೆದಿತ್ತು. ಏಪ್ರಿಲ್ ೯ರಿಂದ ಇದರ ಶೂಟಿಂಗ್ ಭೋಪಾಲ್ ಸುತ್ತುಮುತ್ತ ಆರಂಭಿಸುವುದಿತ್ತು.ಈ ಫಿಲ್ಮಿನ ನಂತರ ಮಣಿರತ್ನಂ ಅವರು ನಿವೃತ್ತರಾಗುವ ಸಾಧ್ಯತೆಗಳಿವೆಯಂತೆ.
ಪೊನ್ನಿಯಿನ ಸೆಲ್ವನ್ ಮಣಿರತ್ನಂ ಅವರ ಮಹತ್ವಕಾಂಕ್ಷಿ ಫಿಲ್ಮ್.ಇದರ ನಂತರ ಅವರು ನಿವೃತ್ತರಾಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ .ಇದೀಗ ಭೂಪಾಲ್ ಮತ್ತು ಸುತ್ತಮುತ್ತ ಕೊರೊನ ಕೇಸುಗಳು ಹೆಚ್ಚುತ್ತಿವೆ. ಅಲ್ಲಿ ಹೆಚ್ಚು ಜನ ಸೇರುವುದಕ್ಕೆ ನಿಷೇಧವಿದೆ. ಶೂಟಿಂಗ್ ನ ಸಂಚಾಲಕರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ .ಯಾಕೆಂದರೆ ಮಣಿರತ್ನಮ್ ಅಲ್ಲಿ ೮೦೦ ಜೂನಿಯರ್ ಆರ್ಟಿಸ್ಟ್ ಗಳ ಕ್ರೌಡ್ ಜೊತೆಗೆ ಚಿತ್ರೀಕರಿಸುವುದಿದ್ದರು. ಆದರೆ ಸಂಚಾಲಕರು ಹಾಗೆ ಮಾಡುವುದನ್ನು ಒಪ್ಪಿರಲಿಲ್ಲ. ೮೦೦ ರ ಜಾಗದಲ್ಲಿ ಐಶ್ವರ್ಯ ರೈ ಬ್ಯಾಕ್ ಗ್ರೌಂಡ್ ನಲ್ಲಿ ಕೇವಲ ಇನ್ನೂರರಷ್ಟು ಜೂನಿಯರ್ ಆರ್ಟಿಸ್ಟ್ ಗಳನ್ನು ಸ್ವೀಕರಿಸಲು ಹೇಳಲಾಗಿತ್ತು .ಆ ಬಗ್ಗೆ ಅಂತಿಮ ಒಪ್ಪಿಗೆ ನೀಡಿರಲಿಲ್ಲ. ಮೂಲಗಳ ಅನುಸಾರ ಫಿಲ್ಮ್ ನ ಟೀಮ್ ಇನ್ನು ರಾಜಸ್ಥಾನ ದತ್ತ ಮುಖಮಾಡಿದೆಯಂತೆ.
ಇನ್ನೊಂದೆಡೆ ’ಜಾದೂಗಾರ್’ ಟೀಮಿನ ೨೫ ಜನರಿಗೆ ಕೊರೊನಾ ಪಾಸಿಟಿವ್:
ಇಲ್ಲಿ ಶೂಟಿಂಗ್ ನಡೆಸುವ ಸಂಚಾಲಕರೊಬ್ಬರ ಪ್ರಕಾರ ಈಗಿನ ಸ್ಥಿತಿ ಒಳ್ಳೆಯದಿಲ್ಲ.ಸ್ಕ್ಯಾಮ್ ನ ಟೀಮ್ ಕೂಡ ಭೂಪಾಲ್ ಪರಿಸರದಲ್ಲಿ ತಮ್ಮ ಮುಂದಿನ ಸೀರಿಸ್ ’ವಿಸಲ್ ಬ್ಲೋಅರ್’ ಶೂಟಿಂಗ್ ಮಾಡುವುದಿತ್ತು. ಆದರೆ ಅವರ ಸಿನೆಮಾಟೋಗ್ರಾಫರ್ ಗೆ ಕೊರೋನಾ ಆಯಿತು. ನೆಟ್ಫ್ಲಿಕ್ಸ್ ನವರು ಜಾದುಗಾರ್ ಶೂಟಿಂಗ್ ಮಾಡುತ್ತಿದ್ದರು. ಆದರೆ ಅವರ ೨೫ ಜನರಿಗೆ ಕೊರೊನಾ ಪಾಸಿಟಿವ್ ಬಂತು. ಹೀಗೆ ಎರಡು ಪ್ರಾಜೆಕ್ಟ್ ನವರು ಪ್ಯಾಕಪ್ ಮಾಡಿ ಮುಂಬೈಗೆ ವಾಪಸ್ ತೆರಳಿದ್ದಾರೆ .ಜಾದುಗಾರ್ ನ ೧೦ ದಿನಗಳ ಶೂಟಿಂಗ್ ಬಾಕಿ ಇದೆಯಷ್ಟೆ.