ಪತಿ ಜತೆ ಶ್ರೀಯಾ ಲಿಪ್‌ಲಾಕ್

ನವದೆಹಲಿ,ಆ.೨-ಬಹುಭಾಷ ನಟಿ ಶ್ರೀಯಾ ಶರಣ್ ಸಿನಿಮಾಗಳಿಗೆ ಕೊಂಚ ಬ್ರೇಕ್ ಕೊಟ್ಟು ರೋಮ್‌ನಲ್ಲಿ ಪತಿಯ ಜೊತೆ ಸುತ್ತಾಡುತ್ತಿದ್ದಾರೆ. ನಟಿಯ ಲಿಪ್‌ಲಾಕ್, ರೊಮ್ಯಾಂಟಿಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೂಪಾ ಅಯ್ಯರ್ ನಿರ್ದೇಶನದ ಚಂದ್ರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ ಶ್ರೀಯಾ ಅವರು ಬಹುಭಾಷಾ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಆರ್‌ಆರ್‌ಆರ್, ಪೊನ್ನಿಯನ್ ಸೆಲ್ವನ್, ಕಬ್ಜ ಸಿನಿಮಾದ ಸಕ್ಸಸ್‌ನಿಂದ ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ.
ಸದ್ಯ ನಟಿ ಶ್ರೀಯಾ ತಮಗೆ ಬೇಡಿಕೆಯಿರುವಾಗಲೇ ೨೦೧೮ರಲ್ಲಿ ರಷ್ಯಾದ ಗೆಳೆಯ ಆಂಡ್ರೆ ಅವರನ್ನು ವಿವಾಹವಾದರು. ಇದೀಗ ರಾಧೆ ಎಂಬ ಮುದ್ದಾದ ಮಗಳಿದ್ದಾಳೆ. ಮಗಳ ಪಾಲನೆ ಜೊತೆಗೆ ಸಿನಿಮಾ ರಂಗದಲ್ಲೂ ಸಕ್ರಿಯರಾಗಿದ್ದಾರೆ.
ಇದೀಗ ಶ್ರೀಯಾ ದಂಪತಿ ರೋಮ್‌ನಲ್ಲಿ ಬೀಡು ಬಿಟ್ಟಿದ್ದಾರೆ. ರೋಮ್‌ನ ಬೀದಿಯಲ್ಲಿ ಲಿಪ್ ಲಾಕ್ ಮಾಡಿರುವ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ? ಸಾರ್ವಜನಿಕ ಜಾಗದಲ್ಲಿ ಹೇಗಿರಬೇಕು ಎಂದು ತಿಳಿದಿಲ್ವಾ ಎಂದು ನೆಟ್ಟಿಗರು ಶ್ರೀಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ನಟಿಯ ರೊಮ್ಯಾಂಟಿಕ್ ಭಾವಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.