ಪತಿ ಜತೆಗಿನ ಫೋಟೋ ಹಂಚಿಕೊಂಡ ಪೂಂಜಾ

ಬೆಂಗಳೂರು,ಮೇ.೨-ನಟಿ ಶುಭಾ ಪೂಂಜಾ ತಮ್ಮ ಪತಿ ಸುಮಂತ್ ಜತೆ ತೆಗೆಸಿಕೊಂಡ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ತೆಗೆಯಲು ನಮ್ಮಿಬ್ಬರಿಗೂ ಬರಲ್ಲ. ಇವು ನಮ್ಮ ಅತ್ತಿಗೆ ತೆಗೆದ ಫೋಟೋಗಳು ಎಂದು ಬರೆದುಕೊಂಡಿದ್ದಾರೆ.
ಶುಭಾ ಪೂಂಜಾ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದು, ಈ ಜೋಡಿ ನೋಡೋಕೆ ತುಂಬಾ ಮುದ್ದಾಗಿ ಕಾಣ್ತಾ ಇದೆ. ಏನಾದ್ರೂ ಹೊಸ ಸಮಾಚಾರ ಇದೆಯಾ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಶುಭಾ ಪೂಂಜಾ ಸುಮಂತ್ ಪ್ರೀತಿಸಿ ಮದುವೆಯಾದವರು. ಅಲ್ಲದೆ ಮದುವೆ ಆಗಲು ಭಯ ಪಡುವರಿಗೆ ಸಂದೇಶ ಹೇಳಿದ್ರು. ಮದುವೆಯಾಗಬೇಕು. ಬೆಳಗ್ಗೆಯಿಂದ ನಾವು ನೂರು ಬಾರಿ ಜಗಳ ಮಾಡಬಹುದು. ಆದ್ರೆ ಸಂಜೆ ವೇಳೆಗೆ ನಾವು ಒಟ್ಟಿಗೆ ನಗುತ್ತೇವೆ. ಅದೇ ಮದುವೆ ಬಂಧನಕ್ಕೆ ಇರುವ ಶಕ್ತಿ ಎಂದು ಸಲಹೆ ನೀಡಿದ್ರು.
ಶುಭಾ ಪೂಂಜಾ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದರು. ನನಗೆ ಸುಮಾರು ಜನ ಕೇಳ್ತಿರುತ್ತಾರೆ ರಾಜಕೀಯಕ್ಕೆ ಬರುತ್ತೀರಾ ಅಂತಾ. ಆದರೆ ಸದ್ಯಕ್ಕೆ ಈ ಬಗ್ಗೆ ಆಲೋಚನೆ ಇಲ್ಲ. ಸಿನಿಮಾಗೆ ಅನಿರೀಕ್ಷಿತವಾಗಿ ಎಂಟ್ರಿ ಸಿಕ್ಕಿತು. ಅದೇ ರೀತಿ ರಾಜಕೀಯಕ್ಕೆ ಬರಲು ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕರೆ ಬರುತ್ತೀನಿ ಎಂದಿದ್ದರು. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದಿದ್ದರು.
ಸದ್ಯಕ್ಕೆ ಶುಭಾ ಪೂಂಜಾ ತ್ರಿದೇವಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ದೇವಿಯಾಗಿ ಶುಭಾ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ