ಪತಿ ಕಿರುಕುಳ ತುಂಬು ಗರ್ಭಿಣಿ ನೇಣಿಗೆ ಶರಣು

ಬೆಂಗಳೂರು,ನ.6- ಪತಿಯ ಕುಡಿತದ ಚಟಕ್ಕೆ ಬೇಸತ್ತು ತುಂಬು ಗರ್ಭಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಸೌಂದರ್ಯ(20) ಮೃತಪಟ್ಟವರು. ಈಕೆ ಒಂದು ವರ್ಷದ ಹಿಂದೆ ಸಂತೋಷ್ ಎಂಬ ಯುವಕನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು.ಸಂತೋಷ್ ಮತ್ತು ಸೌಂದರ್ಯ ದಂಪತಿ ಒಂದೇ ಕಂಪನಿಯಲ್ಲಿ ಅನ್ಯೋನ್ಯದಿಂದ ಕೆಲಸ ಮಾಡುತ್ತಾ, ನೆಲಮಂಗಲ ಸಮೀಪದ ಶಿವನಪುರದಲ್ಲಿ ವಾಸವಾಗಿದ್ದರು. ಇವರ ಪ್ರೀತಿಯ ಫಲವಾಗಿ ಸೌಂದರ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಸಂಪತ್ ಇತ್ತೀಚೆಗೆ ಆ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದ.ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಸಂತೋಷ್‍ ಕುಡಿತದ ಚಟಕ್ಕೆ ಒಳಗಾಗಿ ಅಲ್ಲದೇ ಪ್ರತಿನಿತ್ಯ ಕುಡಿದು ಬಂದು ಸೌಂದರ್ಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದಾಗಿ ಸಂತೋಷ್‍ನ ಹಿಂಸೆ ತಾಳಲಾರದೇ ಮನನೊಂದು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆಗೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಸೌಂದರ್ಯನ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಂತೋಷ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.