ಪತಿಯ ರಾತ್ರಿ ಪಾಳಿಯ ರಹಸ್ಯ ಪತ್ನಿ ನೇಣು


ಬೆಂಗಳೂರು,ಜ.೫- ರಾತ್ರಿ ಪಾಳಿಯಲ್ಲಿ ಕೆಲಸ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗುತ್ತಿದ್ದ ಪತಿಯನ್ನು ಹಿಂಬಾಲಿಸಿ ಕಂಡ ರಹಸ್ಯದಿಂದ ನೊಂದ ಮಹಿಳೆಯು ನೇಣಿಗೆ ಶರಣಾಗಿರುವ ದಾರುಣ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ.
ಶ್ರೀರಾಂಪುರದ ಅಭಿಲಾಷ ಹಾಗೂ ಶಶಿಕುಮಾರ್ ಪ್ರೀತಿಸಿ ವಿವಾಹವಾಗಿ ಆರಂಭದಲ್ಲಿ ಖುಷಿಯಿಂದಲೇ ಸಂಸಾರ ನಡೆಸುತ್ತಿದ್ದರು.
ಮೂರು ತಿಂಗಳ ಬಳಿಕ ಪತ್ನಿ ಅಭಿಲಾಷಗೆ ಶಾಕ್ ಒಂದು ಕಾದಿತ್ತು. ಪ್ರತಿ ದಿನ ರಾತ್ರಿ ಪಾಳಿ ಕೆಲಸ ಎಂದು ರಾತ್ರಿ ೮ಕ್ಕೆ ಮನೆಯಿಂದ ಹೊರಡುತ್ತಿದ್ದ ಪತಿ ಶಶಿಕುಮಾರ್ ಬಗ್ಗೆ ಪತ್ನಿಗೆ ಅನುಮಾನ ವ್ಯಕ್ತವಾಗಿದೆ.
ಒಂದು ದಿನ ಅತನನ್ನು ಹಿಂಬಾಲಿಸಿ ತೆರಳಿದಾಗ ಪತಿ ಶಶಿಕುಮಾರ್ ಬೈಕ್ ಅಪರಿಚಿತರ ಮನೆಯ ಮುಂದೆ ನಿಂತಿರುವುದು ಕಂಡಿದೆ.
ಮನೆಯೊಳಗೆ ನೋಡಿದಾಗ ಪತಿಯ ಕುಚ್ ಕುಚ್ ವಿಷಯ ಬಹಿರಂಗವಾಗಿ ಅಲ್ಲಿಯೇ ಪತಿಯನ್ನು ತರಾಟೆಗೆ ತೆಗೆದುಕೊಂಡ ಪತ್ನಿ ಅಭಿಲಾಷಳನ್ನೇ, ಶಶಿಕುಮಾರ್ ಹೊಡೆದು ಬಾಯ್ ಮುಚ್ಚಿಸಿದ್ದಾನೆ.
ಇದೇ ಬೇಸರದಲ್ಲಿ ಮನೆಗೆ ವಾಪಾಸಾದ ಅಭಿಲಾಷ, ತನ್ನ ತಂಗಿಗೆ ನಡೆದ ವಿಚಾರವನ್ನೆಲ್ಲಾ ಪೋನ್ ಮಾಡಿ ತಿಳಿಸಿ, ಮನೆಯಲ್ಲಿಯೇ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಸಂಬಂಧ ಪ್ರಕರಣ ದಾಖ ಲಿಸಿರುವ ಶ್ರೀರಾಮಪುರ ಪೊಲೀಸರು ಶಶಿಕುಮಾರ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.